ಯುವತಿ ಮೇಲೆ ಗ್ಯಾಂಗ್‌ರೇಪ್‌ಗೆ ಗ್ರಾಮದ 'ಕೋರ್ಟ್' ಆದೇಶ

ಮಂಗಳವಾರ, 1 ಏಪ್ರಿಲ್ 2014 (11:43 IST)
ಪಶ್ಚಿಮಬಂಗಾಳದ ಬಿರ್ಬುಮ್ ಜಿಲ್ಲೆಯಲ್ಲಿ ಬೇರೆ ಸಮುದಾಯಕ್ಕೆ ಸೇರಿದ ಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆಂಬ ಆರೋಪದ ಮೇಲೆ 20 ವರ್ಷ ವಯಸ್ಸಿನ ಯುವತಿಯೊಬ್ಬಳಿಗೆ ಗ್ರಾಮದ 'ಕೋರ್ಟ್' ಘನಘೋರ ಶಿಕ್ಷೆ ನೀಡುವಂತೆ ಆದೇಶ ನೀಡಿತು. 13 ಮಂದಿ ಯುವಕರಿಗೆ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡುವಂತೆ ಗ್ರಾಮದ ಕೋರ್ಟ್ ಆದೇಶ ನೀಡಿದ್ದು, ಈ ಶಿಕ್ಷೆಯಾಗಿತ್ತು. ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆ ಸೇರಿದ ಯುವತಿ ರಾತ್ರಿಯಿಡೀ ತನ್ನ ಮೇಲೆ ಗ್ಯಾಂಗ್‌ರೇಪ್ ಅನೇಕ ಬಾರಿ ನಡೆಯಿತೆಂದು ತಿಳಿಸಿದ್ದಾಳೆ. ತಾನು ಅಂಕಲ್ ಮತ್ತು ದಾದಾ ಎಂದು ಕರೆಯುತ್ತಿದ್ದ ನೆರೆಹೊರೆಯವರೇ ರೇಪ್ ಮಾಡಿದ್ದಾರೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ. ಬಿರ್ಬುಮ್‌ನ ಸುಬಾಲ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಯುವತಿಯ ಮನೆಯಲ್ಲಿ ಆಕೆಯ ಗೆಳೆಯನೊಬ್ಬನು ಇದ್ದಿದ್ದನ್ನು ನೋಡಿದ ಗ್ರಾಮಸ್ಥರು ಗ್ರಾಮದ ಮುಖಂಡನಿಗೆ ದೂರು ನೀಡಿದರು. ಗ್ರಾಮದ ಮುಖಂಡ ಮತ್ತಿತರರು ತಕ್ಷಣವೇ ಪಂಚಾಯಿತಿಯನ್ನು ಕರೆದು ಯುವತಿ ಮತ್ತು ಗೆಳೆಯನಿಂದ 25,000 ರೂ. ಜೋರಿಮಾನ ಅಥವಾ ದಂಡ ಕಟ್ಟುವಂತೆ ಒತ್ತಾಯಿಸಿದರು.ಮಹಿಳೆಯರ ಕುಟುಂಬ ತಮ್ಮ ಬಳಿ ಹಣವಿಲ್ಲವೆಂದು ಹೇಳಿದಾಗ ಗ್ರಾಮದ ಮುಖಂಡ ಯುವತಿಯ ಮೇಲೆ ಗ್ಯಾಂಗ್‌ರೇಪ್ ನಡೆಸುವಂತೆ ಆದೇಶ ನೀಡಿದ.

PR
PR
ನಿರ್ದಯ ಅತ್ಯಾಚಾರದ ಬಳಿಕ ಅವಳನ್ನು ಮರುದಿನ ಮನೆಗೆ ಕಳಿಸಲಾಯಿತು. ಯುವತಿಯ ಗೆಳೆಯಯ ಸೋದರ ದಂಡ ಕಟ್ಟಿ ಅವನನ್ನು ಕರೆದುಕೊಂಡು ಹೋದ.ತೀವ್ರ ಮನನೊಂದ ಯುವತಿಯ ಕುಟುಂಬ ಬುಧವಾರ ಪೊಲೀಸರಿಗೆ ದೂರು ನೀಡಿ ಪೊಲೀಸರು ಎಫ್‌ಐಆರ್ ಫೈಲ್ ಮಾಡಿದ್ದಾರೆ. ಮಹಿಳೆ ಎಫ್‌ಐಆರ್‌ನಲ್ಲಿ 13 ಆರೋಪಿಗಳನ್ನು ಹೆಸರಿಸಿದ್ದು, ಎಲ್ಲರನ್ನೂ ಬಂಧಿಸಲಾಗಿದೆ.ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ತವರುಜಿಲ್ಲೆಯಲ್ಲೇ ಈ ಘಟನೆ ನಡೆದಿರುವುದು ಆಘಾತಕಾರಿಯಾಗಿದೆ.

ಕೊಲ್ಕತ್ತಾದ ಸಮೀಪದ ಜಿಲ್ಲೆಯೊಂದರಲ್ಲಿ ಹದಿಹರೆಯದ ಯುವತಿ ಮೇಲೆ ಎರಡು ಬಾರಿ ಗ್ಯಾಂಗ್‌ರೇಪ್ ಎಸಗಿ ಬೆಂಕಿ ಹಚ್ಚಿ ಕೊಂದ ಘಟನೆ ಇನ್ನೂ ಹಸಿರಾಗಿರುವಾಗಲೇ ಇನ್ನೊಂದು ಘಟನೆ ನಡೆದಿರುವುದು ದಿಗ್ಭ್ರಮೆ ಹುಟ್ಟಿಸಿದೆ.

ವೆಬ್ದುನಿಯಾವನ್ನು ಓದಿ