ಯೋಧರಿಗೆ ಕರ್ತವ್ಯನಿರತ ಸ್ಥಳದಲ್ಲೇ ಮತದಾನಕ್ಕೆ ಸುಪ್ರೀಂಕೋರ್ಟ್ ಅವಕಾಶ

ಸೋಮವಾರ, 24 ಮಾರ್ಚ್ 2014 (15:37 IST)
PR
PR
ನವದೆಹಲಿ: ಯೋಧರಿಗಕರ್ತವ್ಯನಿರತ ಸ್ಥಳದಲ್ಲೇ ಮತದಾನ ಮಾಡುವುದಕ್ಕೆ ಸುಪ್ರೀಂಕೋರ್ಟ್ ಅವಕಾಶ ನೀಡಿದೆ. ಸಂಸದ ರಾಜೀವ್ ಚಂದ್ರಶೇಖರ್ ಯೋಧರಿಗೆ ಮತದಾನದ ಹಕ್ಕು ಒದಗಿಸುವಂತೆ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ್ದರು. ಇದರಿಂದ ಕರ್ತವ್ಯ ನಿರತಸ್ಥಳದಲ್ಲೇ ಮತದಾನಕ್ಕೆ ಅವಕಾಶ ನೀಡಲಾಗಿದೆ. ಸುಪ್ರೀಂಕೋರ್ಟ್ ಪಂಜಾಬ್, ಹರಿಯಾಣ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದು, ಯೋಧರು ತಾವು ಕರ್ತವ್ಯನಿರ್ವಹಿಸುವ ಸ್ಥಳದಲ್ಲೇ ಮತದಾನ ಮಾಡಬಹುದು ಎಂದು ಕೋರ್ಟ್ ತಿಳಿಸಿದೆ. ಮತದಾರರ ಪಟ್ಟಿಯಲ್ಲಿ ಯೋಧರ ಹೆಸರು ನೊಂದಾಯಿಸಲು ಸುಪ್ರೀಂಕೋರ್ಟ್ ಚುನಾವಣೆ ಆಯೋಗಕ್ಕೆ ಸೂಚನೆ ನೀಡಿದೆ.

ಇದಕ್ಕೆ ಮುಂಚೆ ಯೋಧರಿಗೆ ಅಂಚೆ ಮತದಾನಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಅಂಚ ಮತದಾನದಲ್ಲಿ ಲೋಪದೋಷಗಳಿರುವ ಹಿನ್ನೆಲೆಯಲ್ಲಿ ಕರ್ತವ್ಯನಿರತ ಸ್ಥಳದಲ್ಲೇ ಮತದಾನಕ್ಕೆ ಸುಪ್ರೀಂಕೋರ್ಟ್ ಅವಕಾಶ ಮಾಡಿಕೊಟ್ಟಿದೆ.

ವೆಬ್ದುನಿಯಾವನ್ನು ಓದಿ