ರಕ್ಷಣಾ ಪಡೆಗಳಿಗೆ 'ಒಂದು ಶ್ರೇಣಿ, ಒಂದು ಪಿಂಚಣಿ ' ನಿಯಮ

ಸೋಮವಾರ, 17 ಫೆಬ್ರವರಿ 2014 (13:58 IST)
PR
PR
ನವದೆಹಲಿ: ಕೇಂದ್ರ ಬಜೆಟ್ ಲೇಖಾನುದಾನವನ್ನು ಮಂಡಿಸಿರುವ ವಿತ್ತ ಸಚಿವ ಚಿದಂಬರಂ ರಕ್ಷಣಾ ಬಜೆಟ್‌ನಲ್ಲಿ ಶೇ. 10ರಷ್ಟು ಏರಿಕೆ ಮಾಡಿ ರಕ್ಷಣಾ ಪಡೆಗಳಿಗೆ 'ಒಂದು ಶ್ರೇಣಿ ಒಂದು ಪಿಂಚಣಿ ' ತತ್ವವನ್ನು ಒಪ್ಪಿಕೊಂಡಿರುವುದಾಗಿ ಪ್ರಕಟಿಸಿದ್ದಾರೆ. ಚುನಾವಣೆ ಮುನ್ನ ಈ ಪ್ರಕಟಣೆಯಿಂದ ಲಕ್ಷಾಂತರ ಜನ ಯೋಧರ ಬೆಂಬಲ ಸಿಗಲಿದೆ ಎಂದು ಕಾಂಗ್ರೆಸ್ ಆಶಿಸಿದೆ.ತಮ್ಮ ಮಧ್ಯಂತರ ಬಜೆಟ್ ಭಾಷಣದಲ್ಲಿ ಚಿದಂಬರಂ ರಕ್ಷಣಾ ಬಜೆಟ್ ವೆಚ್ಚವನ್ನು 2,24,000 ಕೋಟಿ ರೂ.ಗಳಿಗೆ ಏರಿಸಿರುವುದಾಗಿ ತಿಳಿಸಿದರು.

'ಒಂದು ಶ್ರೇಣಿ, ಒಂದು ಪಿಂಚಣಿ' ನಿಯಮದಡಿ, ಸಮಾನ ದರ್ಜೆ ಮತ್ತು ಸಮಾನ ಸೇವಾವಧಿಯ ನಿವೃತ್ತ ಸೈನಿಕರು ಒಂದೇ ಮೊತ್ತದ ಪಿಂಚಣಿ ಪಡೆಯಲಿದ್ದಾರೆ. ಪ್ರಸಕ್ತ 2006ಕ್ಕಿಂತ ಮುಂಚಿತವಾಗಿ ನಿವೃತ್ತರಾದ ಸೈನಿಕರು ತಮ್ಮ ಕಿರಿಯರಿಗಿಂತ ಕಡಿಮೆ ಪಿಂಚಣಿ ಪಡೆಯುತ್ತಿದ್ದಾರೆ. ರಾಹುಲ್ ಗಾಂಧಿ ಮಾಜಿ ಸೈನಿಕರ ನಿಯೋಗವನ್ನು ಶುಕ್ರವಾರ ಭೇಟಿ ಮಾಡಿದ ಬಳಿಕ ಈ ಪ್ರಕಟಣೆ ಹೊರಬಿದ್ದಿದೆ.'ಒಂದು ಶ್ರೇಣಿ, ಒಂದು ಪಿಂಚಣಿ' ನಿರ್ಧಾರದ ಅನುಷ್ಠಾಕ್ಕೆ 500 ಕೋಟಿ ರೂ.ಗಳನ್ನು 2014-15ರಲ್ಲಿ ವರ್ಗಾವಣೆ ಮಾಡಲಾಗುತ್ತದೆ ಎಂದು ಚಿದಂಬರಂ ಹೇಳಿದರು.

ದೇಶದಲ್ಲಿ 14 ಲಕ್ಷ ಸೇವೆ ಸಲ್ಲಿಸುತ್ತಿರುವ ಮತ್ತು 24 ಲಕ್ಷ ನಿವೃತ್ತ ಮಿಲಿಟರಿ ಸಿಬ್ಬಂದಿಯಿದ್ದಾರೆ. ದಶಕಗಳ ಕಾಲದ 'ಸಮಾನ ದರ್ಜೆ, ಸಮಾನ ಪಿಂಚಣಿ'ಬೇಡಿಕೆಗೆ ಒತ್ತಾಯಿಸಿ ಮಾಜಿ ಸೈನಿಕರು ಪ್ರತಿಭಟನೆಗಳನ್ನು ನಡೆಸಿದ್ದರು. ಅನೇಕ ಹಿರಿಯ ಯೋಧರು ತಮ್ಮ ಪದಕಗಳನ್ನು ಹಿಂತಿರುಗಿಸಿ ಉಪವಾಸ ಮುಷ್ಕರ ಕೈಗೊಂಡಿದ್ದರು.

ವೆಬ್ದುನಿಯಾವನ್ನು ಓದಿ