ರಾಜೀವ್ ಹತ್ಯೆ ಭಾರತದ ಹೃದಯದ ಮೇಲೆ ನಡೆದ ದಾಳಿ: ಸಿಂಗ್ ಅಭಿಮತ

ಗುರುವಾರ, 20 ಫೆಬ್ರವರಿ 2014 (11:22 IST)
PR
PR
ನವದೆಹಲಿ: ರಾಜೀವ್ ಗಾಂಧಿ ಹತ್ಯೆ ಭಾರತದ ಹೃದಯದ ಮೇಲೆ ನಡೆದ ದಾಳಿ ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಇಂದು ಟೀಕಿಸಿದರು. ತಮಿಳುನಾಡು ಸರ್ಕಾರದ ಕ್ರಮ ಕಾನೂನಾತ್ಮಕವಾಗಿ ಕಾರ್ಯಸಾಧ್ಯವಲ್ಲ ಎಂದು ಪ್ರಧಾನಿ ನುಡಿದರು. ರಾಜೀವ್ ಹಂತಕರನ್ನು ಬಿಡುಗಡೆ ಮಾಡುವ ತಮಿಳುನಾಡು ನಿರ್ಧಾರದ ಬಗ್ಗೆ ಪ್ರಧಾನಿ ಹೇಳಿಕೆ ನೀಡಿದರು. ಹಂತಕರ ಬಿಡುಗಡೆ ನಿರ್ಧಾರ ಕಾನೂನುಬಾಹಿರ. ಯಾವುದೇ ಕಾರಣಕ್ಕೂ ಹಂತಕರ ಬಿಡುಗಡೆ ಬೇಡ, ಉಗ್ರರ ವಿರುದ್ಧ ಮೃದುಧೋರಣೆ ಬೇಡ ಎಂದು ಪ್ರಧಾನಿ ತಮಿಳುನಾಡು ಸರ್ಕಾರದ ವಿರುದ್ದ ವಾಗ್ದಾಳಿ ಮಾಡಿದರು.

ಈ ನಡುವೆ 7 ಹಂತಕರ ಬಿಡುಗಡೆ ನಿರ್ಧಾರ ಪ್ರಶ್ನಿಸಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಸುಪ್ರೀಂಕೋರ್ಟ್ ಮಧ್ಯಾಹ್ನ 12.45ಕ್ಕೆ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ.

ವೆಬ್ದುನಿಯಾವನ್ನು ಓದಿ