ರಾಜ್ಯಸಭೆಯಲ್ಲಿ ತೆಲಂಗಾಣ ಮಸೂದೆಗೆ ಅಸ್ತು: ರಾಷ್ಟ್ರಪತಿ ಸಹಿ ಮಾತ್ರ ಬಾಕಿ

ಶುಕ್ರವಾರ, 21 ಫೆಬ್ರವರಿ 2014 (11:03 IST)
PR
PR
ನವದೆಹಲಿ: ರಾಜ್ಯಸಭೆಯಲ್ಲಿ ಗುರುವಾರ ಸಂಪೂರ್ಣ ಗದ್ದಲಗಳ ನಡುವೆ ತೆಲಂಗಾಣ ರಚನೆ ಮಸೂದೆಯನ್ನು ಅಂಗೀಕರಿಸಿದ್ದರಿಂದ ಆಂಧ್ರಪ್ರದೇಶ ವಿಭಜನೆಯಾಗಿ ನೂತನ ತೆಲಂಗಾಣ ರಾಜ್ಯ ರಚನೆಯಾಗಿದೆ. ರಾಷ್ಟ್ರಪತಿ ಮಸೂದೆಗೆ ಸಹಿ ಹಾಕಿ ಕಾಯಿದೆಯಾಗಿ ಪರಿವರ್ತಿಸಿ, ಹೊಸ ರಾಜ್ಯದ ಪ್ರಕಟಣೆ ನೀಡಲಾಗುತ್ತದೆ. ತೆಲಂಗಾಣ ಪರ ಮತ್ತು ವಿರೋಧಿ ಸದಸ್ಯರ ನಡುವೆ ರಾಜ್ಯಸಭೆಯಲ್ಲಿ ತೀವ್ರ ವಾಗ್ದಾಳಿ ನಡೆದು ಗದ್ದಲದ ವಾತಾವರಣ ನಿರ್ಮಾಣವಾಯಿತು. ಎರಡೂ ಸದನದಲ್ಲಿ ಅಭೂತಪೂರ್ವ ಹಿಂಸಾಚಾರ ನಾಚಿಕೆಯಿಂದ ತಲೆತಗ್ಗಿಸುವಂತೆ ಮಾಡಿತು.

ಲೋಕಸಭೆಯಲ್ಲಿ ಸದಸ್ಯರೊಬ್ಬರು ಪೆಪ್ಪರ್ ಸ್ಪ್ರೇ ಎರಚಿದ್ದು, ಇನ್ನೊಬ್ಬ ಸದಸ್ಯರು ಮೈಕ್ ಕಿತ್ತೆಸೆದಿದ್ದು, ಕಂಪ್ಯೂಟರ್ ಎಸೆದಿದ್ದು ಹೀಗೆ ಸದನ ಗದ್ದಲ, ಗೌಜುಗಳಿಗೆ ಎಡೆಮಾಡಿತು.ಟಿವಿ ಪ್ರಸಾರ ಸ್ಥಗಿತಗೊಳಿಸಿರುವ ನಡುವೆ, ಲೋಕಸಭೆ ಮಸೂದೆಯನ್ನು ಅಂಗೀಕರಿಸಿತು. ಆಂಧ್ರಪ್ರದೇಶ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ರಾಜೀನಾಮೆ ನೀಡಿ, ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿದರು.ರಾಜ್ಯಸಭೆಯಲ್ಲಿ ಗುರುವಾರ, ಸಂಸದರು ಕಾಗದಪತ್ರಗಳನ್ನು ಹರಿದರು, ಸದನದ ಬಾವಿಯಲ್ಲಿ ಘೋಷಣೆ ಕೂಗಿದರು. ಪ್ರಧಾನಿ ಮನಮೋಹನ್ ಸಿಂಗ್ ಸೀಮಾಂಧ್ರಕ್ಕೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿದರು.

ಆದರೆ ಪ್ರಧಾನಿ ಹೇಳಿಕೆ ಮಾತ್ರ ಯಾರಿಗೂ ಕೇಳಿಸಲಿಲ್ಲ. ಕಾಂಗ್ರೆಸ್ ಪಕ್ಷ ಸಾರ್ವತ್ರಿಕ ಚುನಾವಣೆಯಲ್ಲಿ ತೆಲಂಗಾಣ ಪ್ರದೇಶದ ಆಕಾಂಕ್ಷೆಯನ್ನು ಈಡೇರಿಸುವ ಮೂಲಕ ತೆಲಂಗಾಣದ ಜನರ ಹೃದಯ ಗೆದ್ದಿದೆ.ತೆಲಂಗಾಣದ ಟಿಆರ್‌ಎಸ್ ಜತೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುತ್ತದೆಂದು ನಿರೀಕ್ಷಿಸಲಾಗಿದೆ.ತೃಣಮೂಲ ಕಾಂಗ್ರೆಸ್ ಮಸೂದೆಯನ್ನು ಅಕ್ರಮವಾಗಿ ಅಂಗೀಕರಿಸಲಾಗಿದೆ ಎಂದು ಟೀಕಿಸಿತು. ಎಡಪಕ್ಷ ಇದನ್ನು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಮ್ಯಾಚ್ ಫಿಕ್ಸಿಂಗ್ ಎಂದು ಕರೆಯಿತು.

ವೆಬ್ದುನಿಯಾವನ್ನು ಓದಿ