ರಾಮ್‌ಲೀಲಾದಲ್ಲಿ ಅರವಿಂದ್ ಲೀಲೆ, ಸಿಎಂ ಗದ್ದುಗೆಗೆ ಸಾಮಾನ್ಯ ಮನುಷ್ಯ

ಶನಿವಾರ, 28 ಡಿಸೆಂಬರ್ 2013 (12:08 IST)
PR
PR
ನವದೆಹಲಿ: ಇಂದು ರಾಮ್‌ಲೀಲಾ ಮೈದಾನ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಾಯಿತು. ಮೆಧ್ಯಾಹ್ನ 12 ಗಂಟೆ ವೇಳೆಗೆ ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಅರವಿಂದ್ ಕೇಜ್ರಿವಾಲ್ ಇಲ್ಲಿ ಪ್ರಮಾಣವಚನ ಸ್ವೀಕರಿಸಿದರು.. ಸಾಮಾನ್ಯ ಮನುಷ್ಯನೊಬ್ಬ ಅಸಾಮಾನ್ಯ ರೀತಿಯಲ್ಲಿ ಮುಖ್ಯಮಂತ್ರಿ ಗದ್ದುಗೆಗೆ ಏರುವ ದೃಶ್ಯಕ್ಕೆ ಸಾಕ್ಷಿಯಾಗಲು ಸಾವಿರಾರು ಜನರು ರಾಮಲೀಲಾ ಮೈದಾನದಲ್ಲಿ ನೆರದಿದ್ದರು. ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣದ ಧ್ಯೇಯೋದ್ದೇಶದೊಂದಿಗೆ ಗದ್ದುಗೆಗೆ ಏರಿದ ಕೇಜ್ರಿವಾಲ್ ಅವರಿಗೆ ಸಾಥ್ ನೀಡಲು 6 ಶಾಸಕರು ಕೂಡ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.ಮನೀಶ್ ಸಿಸೋಡಿಯಾ, ಸೋಮನಾಥ್ ಭಾರತಿ, ಸತ್ಯೇಂದ್ರ ಜೈನ್, ಕುಮಾರಿ ರಾಖಿ ಬಿರ್ಲಾ, ಸೌರಭ್ ಭಾರದ್ವಾಜ್, ಗಿರೀಶ್ ಸೋನಿ ಪ್ರಮಾಣ ವಚನ ಸ್ವೀಕರಿಸಿದ ಉಳಿದ 6 ಸಚಿವರು.

ಅನಾರೋಗ್ಯದ ಹಿನ್ನೆಲೆಯಲ್ಲಿ ಅಣ್ಣಾಹಜಾರೆ ಸಮಾರಂಭಕ್ಕೆ ಗೈರುಹಾಜರಿಯಾಗಿದ್ದರು. ಅರವಿಂದ್ ಕೇಜ್ರಿವಾಲ್ ಅವರು ಮೆಟ್ರೋ ರೈಲಿನಲ್ಲಿ ಪ್ರಮಾಣ ವಚನ ಸಮಾರಂಭಕ್ಕೆ ಆಗಮಿಸಿದರು. ರೈಲ್ವೆ ನಿಲ್ದಾಣದಿಂದ ತೆರೆದ ಜೀಪಿನಲ್ಲಿ ರಾಮಲೀಲಾ ಮೈದಾನಕ್ಕೆ ತೆರಳಿದರು.
ಕೇಜ್ರಿವಾಲ್ ನಡೆದು ಬಂದ ಹಾದಿ-ಮುಂದಿನ ಪುಟದಲ್ಲಿ ಹೆಚ್ಚಿನ ಮಾಹಿತಿ

PR
PR
ಅರವಿಂದ ಕೇಜ್ರಿವಾಲ್ ಅವರು 1968ರ ಜೂನ್ 16ರಂದು ಜನಿಸಿದರು. ಖರಗ್‌ಪುರದ ಐಐಟಿಯಲ್ಲಿ ಎಂಜಿನಿಯರಿಂಗ್ ಪದವಿಯಲ್ಲಿ ಪಡೆದು ನಾಗರಿಕ ಸೇವಾ ಪರೀಕ್ಷೆಯಲ್ಲಿ ಅರ್ಹತೆ ಪಡೆಯುತ್ತಾರೆ. ದೇಶದಲ್ಲಿ ವ್ಯಾಪಿಸಿರುವ ಭ್ರಷ್ಟಾಚಾರ ನಿವಾರಣೆಗೆ ಸಂಕಲ್ಪ ತೊಟ್ಟ ಅರವಿಂದ ಕೇಜ್ರಿವಾಲ್ ಪರಿವರ್ತನಾ ಎಂಬ ಸಂಘವನ್ನು ಸ್ಥಾಪಿಸಿದ್ದಾರೆ. ಆರ್‌ಟಿಐ ಕಾಯ್ದೆಯನ್ನು ಬಳಸಿಕೊಂಡ ಅನೇಕ ಮಂದಿಯ ಬಣ್ಣವನ್ನು ಬಯಲು ಮಾಡಿದ್ದಾರೆ.

2011ರಲ್ಲಿ ಜನಲೋಕಪಾಲ್‌ಗಾಗಿ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಸಂಗಡಿಗರು ಹೋರಾಟ ಮಾಡಿ, ಅಣ್ಣಾ ಹಜಾರೆ ಜತೆ ಭಾಗಿಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ