ರಾಯಲ್ ತೆಲಂಗಾಣ ವಿರೋಧಿಸಿ ನಾಳೆ ಸಂಪೂರ್ಣ ತೆಲಂಗಾಣಾ ಬಂದ್: ಚಂದ್ರಶೇಖರ್

ಬುಧವಾರ, 4 ಡಿಸೆಂಬರ್ 2013 (16:48 IST)
PTI
ರಾಯಲ್ ಸೀಮಾ ಪ್ರಾಂತ್ಯದ ಕೆಲ ಜಿಲ್ಲೆಗಳನ್ನು ತೆಲಂಗಾಣದಲ್ಲಿ ಸೇರಿಸುವ ಕೇಂದ್ರ ಸರಕಾರದ ಪ್ರಸ್ತಾವನೆಯನ್ನು ವಿರೋಧಿಸಿ ತೆಲಂಗಾಣ ರಾಷ್ಟ್ರೀಯ ಸಮಿತಿ ನಾಳೆ ಬಂದ್‌ಗೆ ಕರೆ ನೀಡಲಾಗಿದೆ ಎಂದು ಮುಖ್ಯಸ್ಥ ಕೆ.ಚಂದ್ರಶೇಖರ್ ರಾವ್ ಹೇಳಿದ್ದಾರೆ.

ಒಂದು ವೇಳೆ ಕೇಂದ್ರ ಸರಕಾರ ನಿಲುವು ಬದಲಿಸದಿದ್ದಲ್ಲಿ ಮತ್ತೆ ಅನಿರ್ಧಿಷ್ಠಾವಧಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಕೇಂದ್ರ ಸರಕಾರದ ಉನ್ನತಾಧಿಕಾರ ಸಮಿತಿ ರಾಯಲ್ ತೆಲಂಗಾಣ ಪ್ರಸ್ತಾವನೆಗೆ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಸಮ್ಮತಿ ಸೂಚಿಸಿದ್ದಾರೆ ಎನ್ನುವ ವರದಿಗಳಿಂದ ಟಿಆರ್‌ಎಸ್ ಆಕ್ರೋಶಗೊಂಡಿದೆ.

ಉದ್ದೇಶಿತ ರಾಯಲ್ ತೆಲಂಗಾಣಾದಲ್ಲಿ ರಾಯಲ್ ಸೀಮೆಯ ಕರ್ನೂಲ್ ಮತ್ತು ಅನಂತಪುರ್‌ ಜಿಲ್ಲೆಗಳು ಸೇರಿದಂತೆ ಒಟ್ಟು 12 ಜಿಲ್ಲೆಗಳು ತೆಲಂಗಾಣ ರಾಜ್ಯಕ್ಕೆ ಸೇರಲಿವೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ