ರಾಷ್ಟ್ರೀಯ ಪೊಲೀಸ್ ವಿಶ್ವವಿದ್ಯಾಲಯ

ಸೋಮವಾರ, 17 ಡಿಸೆಂಬರ್ 2007 (17:53 IST)
ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಪೊಲೀಸರು, ಭದ್ರತಾ ಸಿಬ್ಬಂದಿ ಮತ್ತು ರಕ್ಷಣಾ ಸಿಬ್ಬಂದಿಗೆ ತರಬೇತಿ ನೀಡಲು ರಾಷ್ಟ್ರೀಯ ಪೊಲೀಸ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಯೋಜಿಸಿದೆ ಎಂದು ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ತಿಳಿಸಿದ್ದಾರೆ.

ರಾಮವರ್ಮಪುರಂ ಸಮೀಪದಲ್ಲಿ ಕೇರಳ ಪೊಲೀಸ್ ಅಕಾಡೆಮಿ ಸಂಚಾರ ತರಬೇತಿ ಶಾಲೆಗೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಮಾತನಾಡಿದ ಅವರು, ಉದ್ದೇಶಿತ ವಿವಿಯು ಎಲ್ಲ ಮೂರು ಪಡೆಗಳಿಗೆ ಮಾಹಿತಿ ತಂತ್ರಜ್ಞಾನ ತರಬೇತಿ ನೀಡುತ್ತದೆ ಎಂದು ಅವರು ನುಡಿದರು. ತಮ್ಮ ಸಿಬ್ಬಂದಿಗೆ ತರಬೇತಿ ಸೌಲಭ್ಯ ಕಲ್ಪಿಸುವಂತೆ ನೆರೆಯ ರಾಷ್ಟ್ರಗಳಿಂದ ಹಲವಾರು ಮನವಿಗಳು ಬರುತ್ತಿವೆ

ಸರ್ಕಾರ ಕೆಲವು ಮನವಿಗಳನ್ನು ಪರಿಶೀಲನೆ ಮಾಡುವುದು ಎಂದು ಅವರು ನುಡಿದರು. ತಮ್ಮ ಕರ್ತವ್ಯವನ್ನು ಈ ಪಡೆಗಳು ಹೆಚ್ಚು ಪರಿಣಾಮಕಾರಿಯಾಗಿ ಮಾಡುವಂತಾಗಲು ಸರ್ಕಾರ ಆಧುನಿಕ ಉಪಕರಣಗಳು ಮತ್ತು ಶಸ್ತ್ರಾಸ್ತ್ರಗಳನ್ನು ಒದಗಿಸುವುದಾಗಿ ಅವರು ಹೇಳಿದರು.

ಪ್ರಸಕ್ತ ಪೊಲೀಸ್ ಸಿಬ್ಬಂದಿಗೆ ಬರೀ ದೈಹಿಕ ತರಬೇತಿಗೆ ಗಮನಹರಿಸುವ ಬದಲು ಸೂಕ್ತ ತಾಂತ್ರಿಕ ತರಬೇತಿಯನ್ನು ಕೂಡ ನೀಡಲಾಗುವುದು. ಇಂತಹ ತರಬೇತಿಯಿಂದ ಶಸ್ತ್ರಗಳನ್ನು ಬಳಕೆ ಮಾಡುವ ಬದಲಿಗೆ ಪ್ರತಿಭಟನಾ ನಿರತ ಗುಂಪನ್ನು ತಹಬಂದಿಗೆ ತರಲು ತಮ್ಮ ನೈಪುಣ್ಯ ಮತ್ತು ತಂತ್ರಗಳನ್ನು ಉಪಯೋಗಿಸಲು ನೆರವಾಗುತ್ತದೆ ಎಂದು ಅವರು ನುಡಿದರು.

ವೆಬ್ದುನಿಯಾವನ್ನು ಓದಿ