ರಿವಾಲ್ವರ್‌ನಿಂದ ಬೆದರಿಸಿ ಅಣ್ಣನ ಎದುರೇ ತಂಗಿಯ ಮೇಲೆ ಗ್ಯಾಂಗ್‌ರೇಪ್

ಸೋಮವಾರ, 3 ಫೆಬ್ರವರಿ 2014 (17:06 IST)
PR
ಮೇರಠ್ : ಉತ್ತರ ಪ್ರದೇಶದ ಸಹಾರನಪುರ್‌‌ ಜಿಲ್ಲೆಯಲ್ಲಿ ನಾಲ್ಕು ಮಂದಿ ಆರೋಪಿಗಳು ಸಹರಾನ್‌ಪುರ್ ದಿಂದ ಕರ್ನಾಲ್‌ಗೆ ತೆರಳುತ್ತಿದ್ದ ಸಹೋದರನಿಗೆ ರಿವಾಲ್ವರ್‌ನಿಂದ ಬೆದರಿಕೆಯೊಡ್ಡಿ ಆತನ ಸಹೋದರಿಯ ಮೇಲೆ ಗ್ಯಾಂಗ್‌ರೇಪ್ ಎಸಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ್ ಸಿಂಗ್ ತಿಳಿಸಿದ್ದಾರೆ.

ಕರ್ನಾಲ್‌ಗೆ ತೆರಳುತ್ತಿರುವ ಸಂದರ್ಭದಲ್ಲಿ ಅತ್ಯಾಚಾರಕ್ಕೆ ಬಲಿಪಶುವಾದ ಸಹೋದರ ಮತ್ತು ಸಹೋದರಿ ಆರೋಪಿಗಳಿಗೆ ಲಿಫ್ಟ್ ನೀಡುವಂತೆ ಕೇಳಿದ್ದಾರೆ, ನಂತರ ಆರೋಪಿಗಳು ಹತ್ತಿರದಲ್ಲಿದ್ದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಸಹೋದರನ ಎದುರೇ ಸಹೋದರಿಯ ಮೇಲೆ ಗ್ಯಾಂಗ್‌ರೇಪ್ ಎಸಗಿದ್ದಾರೆ.

ಅಣ್ಣ ಮತ್ತು ಯುವತಿಗೆ ರೇಪ್‌ ಮಾಡಿದ ವಿಷಯ ಬಹಿರಂಗಪಡಿಸಿದಲ್ಲಿ ಹತ್ಯೆ ಮಾಡುವುದಾಗಿ ಬೆದರಿಕೆಯೊಡ್ಡಿ ಆರೋಪಿಗಳು ಪರಾರಿಯಾಗಿದ್ದಾರೆ. ಅತ್ಯಾಚಾರಕ್ಕೆ ಬಲಿಯಾದ ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ ಎಂದು ಎಸ್‌ಪಿ ಧರ್ಮೇಂದ್ರ್ ಸಿಂಗ್ ಮಾಹಿತಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ