ರೇಪಿಸ್ಟ್‌ಗಳ ಕಾರುಬಾರು: ಆಸ್ಸಾಂ ರಾಜ್ಯದಲ್ಲಿ ರೇಪ್ ಫೆಸ್ಟಿವಲ್

ಸೋಮವಾರ, 31 ಮಾರ್ಚ್ 2014 (18:54 IST)
ಅಮೆರಿಕಾದ ವೆಬ್‌ಸೈಟ್ ಮಹಿಳಾ ಸುರಕ್ಷತೆಯ ಬಗ್ಗೆ ಪ್ರಕಟಿಸಿದ ಸುದ್ದಿಯೊಂದು ಕೋಲಾಹಲವೆಬ್ಬಿಸಿದೆ. ಆಸ್ಸಾಂ ರಾಜ್ಯದಲ್ಲಿ ಭಾರಿ ಟೀಕೆಗೊಳಗಾಗಿದೆ.

ಆಸ್ಸಾಂ ರೇಪ್ ಫೆಸ್ಟಿವಲ್ ಇನ್ ಇಂಡಿಯಾ ಬಿಗಿನ್ ದಿಸ್ ವೀಕ್ ಎನ್ನುವ ಶೀರ್ಷಿಕೆ ಹೊಂದಿರುವ ಸುದ್ದಿಯನ್ನು ನ್ಯಾಷನಲ್ ರಿಪೋರ್ಟ್ ಡಾಟ್ ನೆಟ್ ನವೆಂಬರ್ 3 ರಂದು ಪ್ರಕಟಿಸಿದೆ.

ನ್ಯಾಷನಲ್ ರಿಪೋರ್ಟ್ ಡಾಟ್ ನೆಟ್ ಪ್ರಕಟಿಸಿದ ಸುದ್ದಿ ಸಾಮಾಜಿಕ ಅತಂರ್ಜಾಲ ತಾಣದಲ್ಲಿ ಭಾರಿ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು ಅನೇಕರು ಇದು ನಿಜ ಸುದ್ದಿ ಎಂದು ನಂಬಿದ್ದಾರೆ.

ವರದಿಗೆ ಫೇಸ್‌ಬುಕ್‌ನಲ್ಲಿ 2 ಲಕ್ಷ 12 ಸಾವಿರ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಟ್ವಿಟ್ಟರ್‌ನಲ್ಲಿ 1800 ಬಾರಿ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿರುವುದು ಬಹಿರಂಗವಾಗಿದೆ. ಆಸ್ಸಾಂ ರೇಪ್ ಫೆಸ್ಟಿವಲ್ ಕ್ರಿಸ್ತ್‌ಪೂರ್ವ 43 ರಲ್ಲಿ ಆರಂಭವಾಗಿದ್ದು, ಪುರುಷನು ಯುವತಿಯನ್ನು ರೇಪ್ ಮಾಡಿದಾಗ ಆಕೆಯ ದೈಹದಲ್ಲಿದ್ದ ಭೂತ ಓಡಿಹೋಗುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

PR
ಹರಿಕೃಷ್ಣ ಮುಜುಮ್‌ದಾರ್ ಎನ್ನುವ ವ್ಯಕ್ತಿಯೊಬ್ಬ ವರದಿಗೆ ಪ್ರತಿಕ್ರಿಯೆ ನೀಡಿ, ಪ್ರಸಕ್ತ ವರ್ಷದಲ್ಲಿ ಅತಿ ಹೆಚ್ಚು ರೇಪ್ ಮಾಡಲು ಪ್ರಯತ್ನಿಸುತ್ತೇನೆ. ನನ್ನ ಸಹೋದರಿ ಮತ್ತು ಆಕೆಯ ಗೆಳತಿಯರನ್ನು ಪ್ರತಿನಿತ್ಯ ರೇಪ್ ಮಾಡಿ ರೇಪಿಸ್ಟ್‌ಗಳಲ್ಲಿ ಅಗ್ರಸ್ಥಾನ ಪಡೆದು ಬಾಲಕೃಷನ್ ಪ್ರಶಸ್ತಿ ಪಡೆಯುವುದು ಖಚಿತ ಎಂದು ಹೇಳಿಕೆ ನೀಡಿ ಆಘಾತ ಮೂಡಿಸಿದ್ದಾನೆ.

ಇದೊಂದು ನಕಲಿ ಸುದ್ದಿ ಎಂದು ನ್ಯಾಷನಲ್‌ ರಿಪೋರ್ಟ್ ವೆಬ್‌ಸೈಟ್ ಯಾವುದೇ ಪ್ರಕಟಣೆ ನೀಡಿಲ್ಲ.

ಆಸ್ಸಾಂ ರೇಪ್ ಫೆಸ್ಟಿವಲ್‌ ಇನ್ ಇಂಡಿಯಾದ ಬಗ್ಗೆ ಆಸಕ್ತಿಯುಳ್ಳ ವ್ಯಕ್ತಿಗಳು ಅಥವಾ ಪಾಲ್ಗೊಳ್ಳ ಬಯಸುವವರು 24 ಗಂಟೆಗಳ ಕಾಲ ಸೇವೆ ನೀಡುವ ಆಸ್ಸಾಂ ಫೆಸ್ಟಿವಲ್ ಹಾಟ್‌ಲೈನ್ (785) 273- 0325 ಸಂಖ್ಯೆಗೆ ಕರೆ ಮಾಡಿ ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ.

ವರದಿಗಳ ಬಗ್ಗೆ ಸಿಐಡಿ ಅಧಿಕಾರಿಗಳು ಸೈಬರ್ ಪೊಲೀಸರ ನೆರವಿನಿಂದ ಪತ್ತೆ ಹಚ್ಚಿದ್ದು ಉಗಾಂಡಾ ಮೂಲದಿಂದ ಸುದ್ದಿಯನ್ನು ಪಡೆಯಲಾಗಿದ್ದು, ಅಮೆರಿಕದ ಹೌಸ್ಟನ್‌ ನಗರದಲ್ಲಿರುವ ವೆಬ್‌ಸೈಟ್ ಮೂಲಕ ಪೋಸ್ಟ್ ಮಾಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ನಿರ್ಮಲ್ ಬೈಷ್ಯಾ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ