ರೇಪಿಸ್ಟ್ ವ್ಯಕ್ತಿಯ ಪುತ್ರನಿಗೆ ರೇಪ್‌‌ಪೀಡಿತ ಮಹಿಳೆಯ ಪುತ್ರಿಯ ಜತೆ ವಿವಾಹ: ವಿಚಿತ್ರ ತೀರ್ಪು

ಗುರುವಾರ, 5 ಸೆಪ್ಟಂಬರ್ 2013 (14:10 IST)
PR
ರೇಪ್ ಎಸಗಿದ ವ್ಯಕ್ತಿಯ 8 ವರ್ಷ ವಯಸ್ಸಿನ ಮಗನಿಗೆ ರೇಪ್‌ಗೊಳಗಾದ ಮಹಿಳೆಯ 6 ವರ್ಷದ ಪುತ್ರಿಯನ್ನು ವಿವಾಹ ಮಾಡಿಕೊಡಬೇಕು ಎಂದು ರಾಜಸ್ತಾನದ ಪಂಚಾಯಿತಿ ವಿಚಿತ್ರ ತೀರ್ಪು ನೀಡಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಜೈಪುರ್‌ದಿಂದ 250 ಕಿ.ಮೀ ದೂರದಲ್ಲಿರುವ ಕೋಟಾ ಜಿಲ್ಲೆಯ ಕೇಶವಪುರಾ ಗ್ರಾಮದಲ್ಲಿ ನಡೆದಿದೆ.

40 ವರ್ಷ ವಯಸ್ಸಿನ ಆರೋಪಿ 15 ದಿನಗಳ ಹಿಂದೆ ನೆರೆಮನೆಯಲ್ಲಿದ್ದ ಯುವತಿಯನ್ನು ಕೋಣೆಯಲ್ಲಿ ಕೂಡಿಹಾಕಿ ಅತ್ಯಾಚಾರವೆಸಗಿದ್ದಾನೆ. ಹಿರಿಯರು ಅತ್ಯಾಚಾರದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವ ಬದಲು ಗ್ರಾಮಪಂಚಾಯಿತಿಗೆ ಮೊರೆಹೋಗಿದ್ದಾರೆ.

ರೇಪ್‌ ಎಸಗಿದ ವ್ಯಕ್ತಿಯ ಮಗನನ್ನು ರೇಪ್‌ಗೊಳಗಾದ ಯುವತಿಯ ಪುತ್ರಿಗೆ ವಿವಾಹ ಎರ್ಪಡಿಸಿ ಎಂದು ಪಂಚಾಯಿತಿ ತೀರ್ಪು ನೀಡಿದೆ.

ಘಟನೆಯ ಮಾಹಿತಿ ತಿಳಿದ ಕೆಲ ಸಾಮಾಜಿಕ ಸಂಘಟನೆಗಳು ರೇಪ್‌ಗೊಳಗಾದ ಮಹಿಳೆ ಮತ್ತು ಆಕೆಯ ತಂದೆತಾಯಿಯನ್ನು ಕೋಟಾ ನಗರದಲ್ಲಿರುವ ಮಹಾವೀರ್ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ದೂರು ದಾಖಲಿಸಿದ್ದಾರೆ.

ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಆರೋಪಿಯನ್ನು ಬಂಧಿಸಲಾಗಿದ್ದು, ಪಂಚಾಯಿತಿ ಸದಸ್ಯರ ವಿರುದ್ಧ ಕೂಡಾ ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿ ಬಾನ್ವರಿ ಲಾಲ್ ಮೀನಾ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ