ರೇಪ್‌ನಿಂದ ನೊಂದ 12 ವರ್ಷದ ಬಾಲಕಿ ಆತ್ಮಹತ್ಯೆಗೆ ಶರಣು

ಮಂಗಳವಾರ, 1 ಏಪ್ರಿಲ್ 2014 (12:51 IST)
ಕೇಟುಗ್ರಾಂ:ಇವಳು ಕೇವಲ 12 ವರ್ಷ ವಯಸ್ಸಿನ ಬಾಲಕಿ. 6ನೇ ತರಗತಿ ಓದುತ್ತಿದ್ದಳು. ಆದರೆ ನೆರಮನೆಯವನ ಅತ್ಯಾಚಾರದಿಂದ ತೀವ್ರ ಮಾನಸಿಕ ಆಘಾತ, ನಾಚಿಕೆಗೆ ಒಳಪಟ್ಟ ಬಾಲಕಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದಳು. ಕೇಟುಗ್ರಾಮದ ಬುರ್ದ್ವಾನ್ ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿದೆ. ಬಾಲಕಿ ಒಂಟಿಯಾಗಿ ಮನೆಯಲ್ಲಿದ್ದಾಗ, ನೆರೆಮನೆಯವ ಮನೆಯೊಳಗ್ಗೆ ನುಗ್ಗಿ ಅವಳ ಮೇಲೆ ರೇಪ್ ಮಾಡಿದ. 12 ವರ್ಷ ವಯಸ್ಸಿನ ಬಾಲಕಿ ತಾನು ಶೀಲ ಕಳೆದುಕೊಂಡೆನೆಂಬ ಮಾನಸಿಕ ವೇದನೆಗೆ ಒಳಪಟ್ಟು ಸೀದಾ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಶರಣಾದಳು.ಅವಳು ಸಾಯುವ ಮುಂಚೆ ಅವಳ ಹೇಳಿಕೆಯನ್ನು ದಾಖಲಿಸಿಕೊಂಡಿದ್ದೇವೆ.

ನೆರಮನೆಯ ಅಮರ್ ಮಾಜಿ ನನ್ನ ಮೇಲೆ ರೇಪ್ ಮಾಡಿದ್ದರಿಂದ ತೀವ್ರ ನಾಚಿಕೆಪಟ್ಟು ಆತ್ಮಹತ್ಯೆಗೆ ನಿರ್ಧರಿಸಿದ್ದಾಗಿ ಹೇಳಿದ್ದಾಳೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.ತಾನು ಶಾಲೆಗೆ ಹೋಗುವಾಗಲೆಲ್ಲ ಮಾಜಿ ಹಿಂಬಾಲಿಸುತ್ತಿದ್ದ. ತಾನು ಮನೆಯಲ್ಲಿ ಒಂಟಿಯಾಗಿರುವುದನ್ನು ನೋಡಿ ಅತ್ಯಾಚಾರ ಮಾಡಿದ ಎಂದು ಬಾಲಕಿ ಹೇಳಿಕೆಯಲ್ಲಿ ತಿಳಿಸಿದ್ದಾಳೆ. ಅಪರಾಧ ಕೃತ್ಯವೆಸಗಿದ ಕೂಡಲೇ ಅವನು ಪರಾರಿಯಾಗಿದ್ದರೂ ಅವನನ್ನು ಬಂಧಿಸಲು ಯಶಸ್ವಿಯಾಗಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ