ರೇಪ್ ಮಾಡುವಾಗ ಆಕೆ ಬೇಡ ಅನ್ನಲಿಲ್ಲ, ಕೂಗಲೂ ಇಲ್ಲ ಎಂದ ಅತ್ಯಾಚಾರಿ ಖುಲಾಸೆ

ಶನಿವಾರ, 5 ಏಪ್ರಿಲ್ 2014 (14:06 IST)
ಅತ್ಯಾಚಾರವೆಸಗುತ್ತಿರುವಾಗ ಆರೋಪಿಯನ್ನು ತಡೆಯದಿರುವುದು ಮತ್ತು ಜೋರಾಗಿ ಕೂಗದಿರುವುದರಿಂದ ಮಹಿಳೆಯ ನಡತೆ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ನ್ಯಾಯಾಲಯ ತೀರ್ಪು ನೀಡಿ ಅತ್ಯಾಚಾರ ಆರೋಪಿಯನ್ನು ಖುಲಾಸೆಗೊಳಿಸಿದೆ.



ಆರೋಪಿ ಅತ್ಯಾಚಾರವೆಸಗಿದ ನಂತರ ಮಹಿಳೆ ಆರೋಪಿಯ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡುವ ಬದಲು ಆತನ ಅಂಗಡಿಯಲ್ಲಿಯೇ ಸಾಲದ ಆಧಾರದ ಮೇಲೆ ವಸ್ತುಗಳ ಖರೀದಿಸಿದ್ದಲ್ಲದೇ ಆತನ ತಾಯಿಯಿಂದ 2000 ರೂಪಾಯಿಗಳನ್ನು ಪಡೆದಿದ್ದಾಳೆ ಎಂದು ಹೆಚ್ಚುವರಿ ನ್ಯಾಯಾಧೀಶ ವಿರೇಂದ್ರ ಭಟ್ ತೀರ್ಪಿನಲ್ಲಿ ತಿಳಿಸಿದ್ದಾರೆ.

ಆರೋಪಿ ವ್ಯಕ್ತಿ ಅತ್ಯಾಚಾರವೆಸಗುವ ಮುನ್ನ ಕೆಲ ಕಾಲ ಮಹಿಳೆಯೊಂದಿಗೆ ಮಾತುಕತೆ ನಡೆಸಿದ್ದಾನೆ. ಆ ಸಂದರ್ಭದಲ್ಲಿಯೇ ಮಹಿಳೆ ಜೋರಾಗಿ ಕೂಗಿ ಸಾರ್ವಜನಿಕರ ಸಹಾಯ ಪಡೆಯಬಹುದಿತ್ತು. ಆದರೆ, ಅವಳು ಹಾಗೇ ಮಾಡಲಿಲ್ಲ. ಇದರಿಂದ ಮಹಿಳೆಯ ನಡತೆ ಸಂಶಯಕ್ಕೆ ಆಸ್ಪದ ಮಾಡಿಕೊಟ್ಟಿದೆ ಎಂದು ಹೇಳಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಆರೋಪಿ ಜನರಲ್ ಸ್ಟೋರ್ಸ್ ನಡೆಸುತ್ತಿದ್ದು, ಮಾರ್ಚ್ 2013 ರಲ್ಲಿ ಪಶ್ಚಿಮ ದೆಹಲಿಯಲ್ಲಿರುವ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದನು.

ವೆಬ್ದುನಿಯಾವನ್ನು ಓದಿ