ರೊಚ್ಚಿಗೆದ್ದ ಆಂಧ್ರ ಪ್ರತಿಭಟನೆ : ತಿರುಪತಿ ಬಂದ್‌.

ಮಂಗಳವಾರ, 24 ಸೆಪ್ಟಂಬರ್ 2013 (10:21 IST)
PTI
PTI
ಆಂಧ್ರಪ್ರದೇಶ ಮತ್ತೆ ರೊಚ್ಚಿಗೆದ್ದಿದೆ. ಸಮೈಕ್ಯಾಂಧ್ರದ ಪ್ರತಿಭಟನೆ ಮುಗಿಲು ಮುಟ್ಟಿದೆ. ಜಗನ್‌ ಮೋಹನ್‌ ರೆಡ್ಡಿ ಚಂಚಲಗೂಡ್‌ ಜೈಲಿನಿಂದ ಬಿಡುಗಡೆಯಾಗುತ್ತಿರುವ ಬೆನ್ನಲ್ಲಿಯೇ ಪ್ರತಿಭಟನೆಯ ಕಾವು ಇನ್ನಷ್ಟು ಹೆಚ್ಚಾಗಿದೆ. ಆಂಧ್ರದಲ್ಲಿ ಸುಮಾರು 13 ಜಿಲ್ಲೆಗಳು ಸಂಪೂರ್ಣ ಬಂದ್‌ ಆಗಿದ್ದು, ತಿರುಪತಿ ಕೂಡ ಸ್ಥಬ್ಧವಾಗಿದೆ.

ಕೇಂದ್ರ ಸರ್ಕಾರವು ಅಖಂಡ ಆಂಧ್ರಪ್ರದೇಶವನ್ನು ತೆಲಂಗಾಣ ಮತ್ತು ಸೀಮಾಂಧ್ರವನ್ನಾಗಿ ವಿಭಾಗಿಸಿರುವುದನ್ನು ಖಂಡಿಸಿ ಹಿಂದಿನಿಂದಲೂ ಸೀಮಾಂಧ್ರ ಪ್ರದೇಶದಲ್ಲಿ ಭಾರೀ ಪ್ರತಿರೋಧ ವ್ಯಕ್ತವಾಗಿತ್ತು. ಇದಕ್ಕಾಗಿ ಹಲವಾರು ಪ್ರತಿಭಟನೆಗಳು ನಡೆದವು. ಆದ್ರೆ ಪ್ರತಿಭಟನೆ ಮತ್ತಷ್ಟು ಹೆಚ್ಚಾಗಿದೆ.

ಆಂಧ್ರ ಪ್ರತಿಭಟನೆಗೆ ತಿರುಪತಿ ಕೂಡ ಸ್ಥಬ್ಧವಾಗಿದ್ದು.. ಭಕ್ತರು ಪರದಾಡುತ್ತಿದ್ದಾರೆ. ಇನ್ನಷ್ಟು ಸುದ್ದಿ ಮುಂದಿನ ಪುಟದಲ್ಲಿ...

PTI
PTI
ಈ ಪ್ರತಿಭಟನೆಯ ಬಿಸಿ ತಿರುಪತಿ ತಿಮ್ಮಪ್ಪನ ಸನ್ನಿಧಿಗೂ ತಟ್ಟಿದ್ದು ಇಡೀ ತಿರುಪತಿ ಸಂಪೂರ್ಣವಾಗಿ ಬಂದ್‌ ಆಗಿದೆ. ಇಂದು ತಿರುಪತಿಯಲ್ಲಿ ಯಾವುದೇ ರೀತಿಯ ದರ್ಶನ, ಪೂಜೆ, ಪುನಸ್ಕಾರಗಳು ನಡೆಯುವುದಿಲ್ಲ ಎಂಬುದನ್ನು ದೇವಾಲಯದ ಸಮಿತಿ ಹೇಳಿದೆ.

ದರ್ಶನಕ್ಕೆ ಆಗಮಿಸಿದ ಭಕ್ತರು ಸಂಜೆಯ ವೇಳೆಯವರೆಗೆ ಅಲ್ಲಿಯೇ ತಂಗಲು ಟಿಟಿಡಿ ಸಮಿತಿ ಮನವಿ ಮಾಡಿದೆ. ಕಳೆದ 38 ವರ್ಷಗಳ ಇತಿಹಾಸದಲ್ಲಿ ತಿರುಪತಿ ಬಂದ್‌ ಆಗುತ್ತಿರುವುದು ಇದು 3ನೇ ಬಾರಿ. ಬಂದ್‌ಗೆ ಆಂಧ್ರದ 13 ಜಿಲ್ಲೆಗಳಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದೆ. ತಿರುಪತಿ ಸೇರಿದಂತೆ ಆಂಧ್ರದಲ್ಲಿ ಹೆಚ್ಚಿದ ಪ್ರತಿಭಟನೆಯಿಂದಾಗಿ ತಮಿಳುನಾಡು ಮತ್ತು ಕರ್ನಾಟಕದ ಗಡಿಗಳಲ್ಲಿ ವಾಹನಗಳಿಗೆ ತಡೆ ನೀಡಲಾಗಿದ್ದು, ಬಸ್‌ ವ್ಯವಸ್ಥೆ ಸ್ಥಗಿತವಾಗಿದೆ.

ವೆಬ್ದುನಿಯಾವನ್ನು ಓದಿ