ಲಾಲೂ ಭಂಟ ಮೋದಿ ಪಕ್ಷಕ್ಕೆ?

ಶುಕ್ರವಾರ, 16 ಆಗಸ್ಟ್ 2013 (17:44 IST)
PR
PR
ರಾಷ್ಟ್ರ ರಾಜಕಾರಣದಲ್ಲಿ ಕ್ಷಿಪ್ರಗತಿಯ ಬೆಳವಣಿಗೆಗಳು ಕಂಡುಬರುತ್ತಿವೆ. ಇಷ್ಟು ದಿನ ಕಾಂಗ್ರೆಸ್‌ ಪಕ್ಷದಲ್ಲಿ ಗುರ್ತಿಸಿಕೊಂಡಿದ್ದ ಲಾಲೂ ಪ್ರಸಾದ್‌ ಸೋದರ ಸಂಬಂಧಿಯಾದ ಸಾಧೂ ಯಾದವ್‌ ಇದೀಗ ಬಿಜೆಪಿಗೆ ಕಡೆ ಮುಖಮಾಡುತ್ತಿದ್ದಾರೆ ಎಂಬ ಊಹಾಪೋಹಗಳು ಕೇಳಿ ಬರ್ತಿವೆ. ಈ ಊಹಾಪೋಹಕ್ಕೆ ಪುಷ್ಟಿ ನೀಡುವಂತಹ ಬೆಳವಣಿಗೆಯೊಂದು ಇಂದು ಅಹ್ಮದಾಬಾದ್‌ನಲ್ಲಿ ನಡೆದಿದೆ.

ಇಂದು ನಗರಕ್ಕೆ ಆಗಮಿಸಿದ ಕಾಂಗ್ರೆಸ್‌ನ ಸಾಧು ಯಾದವ್‌ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಗುಪ್ತವಾಗಿ ಭೇಟಿ ಮಾಡಿದ್ದಾರೆ. ಭೇಟಿಯ ಸ್ಪಷ್ಟ ಕಾರಣ ಇನ್ನು ತಿಳಿದುಬಂದಿಲ್ಲ. ಆದರೆ ಕೆಲವೊಂದು ಮೂಲಗಳ ಪ್ರಕಾರ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದ ಸಾಧು ಯಾದವ್‌ರನ್ನು ಪಕ್ಷದಿಂದ ಹೊರಹಾಕುವ ಚಿಂತನೆಗಳು ನಡೆಯುತ್ತಿವೆ. ಹೀಗಾಗಿ ಬಿಜೆಪಿ ಸೇರುವ ಮನಸ್ಥಿತಿಯಿಂದ ಮೋದಿಯನ್ನು ಭೇಟಿ ಮಾಡಿದ್ದಾರೆ ಎನ್ನಲಾಗ್ತಿದೆ.


ಸಾಧು ಯಾದವ್ ಈ ಹಿಂದೆ ಲಾಲೂ ಪ್ರಸಾದ್‌ರವರ ಆರ್‌ಜೆಡಿ ಪಕ್ಷದ ಜೊತೆಗೆ ಗುರ್ತಿಸಿಕೊಂಡಿದ್ದರು. ಆದರೆ ಕೆಲವೊಂದು ಕಾರಣಗಳಿಂದಾಗಿ ಲಾಲೂ ಪಕ್ಷವನ್ನು ತೊರೆದು ಕಾಂಗ್ರೆಸ್‌ಗೆ ಲಗ್ಗೆ ಇಟ್ಟಿದ್ದರು. ಇದೀಗ ಕಾಂಗ್ರೆಸ್‌ ಪಕ್ಷದಿಂದ ಹೊರ ಹಾಕುವ ಚಿಂತನೆಯಲ್ಲಿದ್ದು, ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವ ಸಲುವಾಗಿ ಮೋದಿ ಹಸ್ತ ಹಿಡಿಯುವ ಯತ್ನದಲ್ಲಿದ್ದಾರೆ.

ವೆಬ್ದುನಿಯಾವನ್ನು ಓದಿ