ಲಾಲ್ ಬಹಾದುರ್ ಶಾಸ್ತ್ರಿ ಮೊಮ್ಮಗ 1 ಕೋಟಿ ರೂ. ನೌಕರಿ ಬಿಟ್ಟು ಆಪ್ ಸೇರಿದ

ಸೋಮವಾರ, 30 ಡಿಸೆಂಬರ್ 2013 (14:49 IST)
PR
ನವದೆಹಲಿ: ದೇಶದ ಮಾಜಿ ಪ್ರಧಾನ ಮಂತ್ರಿ ಲಾಲ್‌ಬಾಹದ್ದುರ ಶಾಸ್ತ್ರೀಯ ಮೊಮ್ಮಗ ಆದರ್ಶ ಶಾಸ್ತ್ರೀ ಒಂದು ಕೋಟಿ ರೂಪಾಯಿಯ ನೌಕರಿ ಬಿಟ್ಟು ಆಮ್‌ ಆದ್ಮಿ ಸೇರಿದ್ದಾರೆ. ಕಾಂಗ್ರೆಸ್‌ ಪಕ್ಷದ ನೇತಾ ಅನಿಲ್ ಶಾಸ್ತ್ರೀಯವರ ಮಗ ಇವರಾಗಿದ್ದಾರೆ.

ಒಂದು ಸುದ್ದಿ ಮಾಧ್ಯಮದ ಪ್ರಕಾರ ಆದರ್ಶ ಶಾಸ್ತ್ರೀ ಆಪಲ್‌ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಆಪಲ್‌ ಕಂಪೆನಿಯಲ್ಲಿ ಇವರಿಗೆ ಒಂದು ಕೋಟಿಗಿಂತ ಅಧಿಕವಾದ ಸಂಬಳವಿತ್ತು. 40 ವರ್ಷದ ಆದರ್ಶ ಶಾಸ್ತ್ರೀ ಆಪಲ್‌ ಕಂಪೆನಿಯ ಪಶ್ಚಿಮ ಭಾರತದ ಸೆಲ್ಸ್‌ ಹೆಡ್ ಆಗಿದ್ದರು.

ನಾನು ನನ್ನ ಸ್ವಂತ ನಿರ್ಧಾರದಿಂದ ಆಪಲ್ ಬಿಟ್ಟು ಆಪ್‌ ಸೇರಿದ್ದೆನೆ ಎಂದು ಮಾಧ್ಯಮದವರೊಂದಿಗೆ ಮಾತನಾಡುವಾಗ ಶಾಸ್ತ್ರೀ ಹೇಳಿದರು. ಅರವಿಂದ ಕ್ರೇಜಿವಾಲ ಅವರಿಂದ ಪ್ರೇರಿತರಾಗಿ ನಾನು ಆಪ್‌ ಸೇರಿದ್ದೆನೆ ಎಂದು ಶಾಸ್ತ್ರೀ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ