ಲೈಂಗಿಕ ಕಿರುಕುಳದ ವಿರುದ್ಧ ಕ್ರಮ ಕೈಗೊಳ್ಳಬೇಡಿ, ಹುಷಾರ್

ಸೋಮವಾರ, 31 ಮಾರ್ಚ್ 2014 (19:33 IST)
ಚೆನ್ನೈ: ಕಂಪೆನಿಯ ಹಿರಿಯ ಅಧಿಕಾರಿಗಳು ಲೈಂಗಿಕ ಕಿರುಕುಳದ ಪ್ರಕರಣದಲ್ಲಿ ಒಳಗೊಂಡಾಗ ಕ್ರಮ ಕೈಗೊಳ್ಳುವ ಧೈರ್ಯ ಮಾಡಬೇಡಿ, ಹುಷಾರ್, ಇದು ನಿಮ್ಮ ಉದ್ಯೋಗಕ್ಕೆ ಕಂಟಕವಾಗಬಹುದು . ಏಕೆಂದರೆ ಹೀಗೆ ಕ್ರಮಕ್ಕೆ ಮುಂದಾದ ಚೆನ್ನೈನ ಎಚ್.ಆರ್. ಮ್ಯಾನೇಜರ್ ಒಬ್ಬರು ಕೆಲಸ ಕಳೆದುಕೊಂಡು, ಕಳೆದ ಎರಡು ವರ್ಷಗಳಿಂದ ನಿರುದ್ಯೋಗದ ಬಿಸಿ ಅನುಭವಿಸ್ತಿದ್ದಾರೆ. ಚೆನ್ನೈನಲ್ಲಿ ಮಹಿಳಾ ಸಹೋದ್ಯೋಗಿಯೊಬ್ಬರು ಸಂಸ್ಥೆಯ ನಿರ್ದೇಶಕರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದರು. ಈ ಬಗ್ಗೆ ಕ್ರಮ ಕೈಗೊಂಡ ಮಾನವ ಸಂಪನ್ಮೂಲ ಮ್ಯಾನೇಜರ್ ಕಳೆದ ಎರಡು ವರ್ಷಗಳಿಂದ ನಿರುದ್ಯೋಗದ ಬಿಸಿ ಅನುಭವಿಸುತ್ತಿದ್ದಾರೆ. ಎಎಸ್ ರಾಜರಾಜನ್ ಅಮೆರಿಕ ಮೂಲಕ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಎಚ್ ಆರ್ ಮ್ಯಾನೇಜರ್ ಹುದ್ದೆ ನಿರ್ವಹಿಸುತ್ತಿದ್ದರು.

ಅವರ ವೇತನ ವರ್ಷಕ್ಕೆ 19 ಲಕ್ಷ ರೂ. ಅಂದರೆ ತಿಂಗಳಿಗೆ ಒಂದೂವರೆ ಲಕ್ಷಕ್ಕಿಂತ ಹೆಚ್ಚು ಸಂಬಳ ಪಡೆಯುತ್ತಿದ್ದರು. ಮಹಿಳಾ ಸಹೋದ್ಯೋಗಿ ನಿರ್ದೇಶಕರ ವಿರುದ್ಧ ಲೈಂಗಿಕ ಕಿರುಕುಳದ ದೂರು ನೀಡಿದ ಬಳಿಕ ತನಿಖೆಯಲ್ಲಿ ನಿರ್ದೇಶಕರು ತಪ್ಪಿತಸ್ಥರೆಂದು ರುಜುವಾತಾಗಿ ಅವರು ರಾಜೀನಾಮೆ ನೀಡಿದರು. ಆದರೆ ಎಚ್ ಆರ್ ಮ್ಯಾನೇಜರ್ ರಾಜರಾಜನ್ ಈ ವಿಷಯವನ್ನು ಸರ್ಕಾರಕ್ಕೆ ವರದಿ ಮಾಡಲು ಬಯಸಿದಾಗ ಅವರಿಗೆ ತೊಂದರೆ ಷುರುವಾಯ್ತು.

ಅವರಿಗೆ ಮೂರು ಮಟ್ಟಗಳಲ್ಲಿ ಹಿಂಬಡ್ತಿ ನೀಡಲಾಯಿತು. ಅವರು ಸಂಸ್ಥೆಯ ನಿರ್ಧಾರವನ್ನು ಕೋರ್ಟ್‌ನಲ್ಲಿ ಪ್ರಶ್ನಿಸಿದಾಗ ಕೆಲಸದಿಂದ ವಜಾ ಮಾಡಲಾಯಿತು. ಈಗ ಯಾವ ಕಂಪೆನಿಯೂ ಅವರನ್ನು ನೇಮಕ ಮಾಡುತ್ತಿಲ್ಲ. ಪ್ರಸಕ್ತ ಏರೋ ಮಾಡಲಿಂಗ್ ಹವ್ಯಾಸದಲ್ಲಿ ಅವರು ತೊಡಗಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ