ಲೋಕಪಾಲಕ್ಕೆ ಸಂವಿಧಾನ ದರ್ಜೆ ಪಡೆದೆ ತೀರುತ್ತೇನೆ: ರಾಹುಲ್ ಪ್ರತಿಜ್ಞೆ

ಶನಿವಾರ, 31 ಡಿಸೆಂಬರ್ 2011 (13:32 IST)
PTI
ರಾಜ್ಯಸಭೆಯಲ್ಲಿ ಲೋಕಪಾಲ ಮಸೂದೆಗೆ ಬೆಂಬಲ ಪಡೆಯುವಲ್ಲಿ ಮುಖಭಂಗ ಎದುರಿಸಿದ ರಾಹುಲ್ ಗಾಂಧಿ, ಲೋಕಪಾಲ ಮಸೂದೆಗೆ ಸಂವಿಧಾನಿಕ ದರ್ಜೆ ದೊರಕಿಸಿಕೊಡುವವರೆಗೆ ವಿರಮಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ.

ಕೇಂದ್ರ ಚುನಾವಣಾ ಆಯೋಗದಂತೆ ಲೋಕಪಾಲ ಸಂಸ್ಥೆಗೆ ಸಂವಿಧಾನಿಕ ಸ್ಥಾನಮಾನ ಕೊಡಿಸುವ ಪರವಾಗಿದ್ದೆ. ಆದರೆ, ಇದು ರಾಹುಲ್ ಕನಸು ಎಂದು ವಿಪಕ್ಷಗಳು ಮಸೂದೆಯನ್ನು ಬೆಂಬಲಿಸಲಿಲ್ಲ. ರಾಹುಲ್ ಗಾಂಧಿಯೊಬ್ಬನ ಕನಸಾಗಿರಲಿಲ್ಲ. ದೇಶದ ಯುವಕರ ಕನಸಾಗಿತ್ತು. ಲೋಕಪಾಲಕ್ಕೆ ಸಂವಿಧಾನ ದರ್ಜೆ ಪಡೆಯುವವರಿಗೆ ವಿಶ್ರಾಂತಿ ಬಯಸುವುದಿಲ್ಲ ಎಂದು ಘೋಷಿಸಿದರು.

ದಿವಂಗತ ಮಾಜಿ ಪ್ರಧಾನಿ ಹಾಗೂ ತಂದೆಯಾದ ರಾಜೀವ್ ಗಾಂಧಿಯವರ ಅಧಿಕಾರ ವಿಕೇಂದ್ರಿಕರಣ ಮತ್ತು ಮಾಹಿತಿ ತಂತ್ರಜ್ಞಾನ ಕ್ರಾಂತಿಯ ಕನಸಿನಂತೆ ಲೋಕಪಾಲ ಸಂಸ್ಥೆಗೆ ಸಂವಿಧಾನಿಕ ದರ್ಜೆ ಕೊಡಿಸುವುದು ನನ್ನ ಕನಸಾಗಿದೆ. ಆದರೆ, ಗಡುವಿನ ಮಿತಿಯಿಲ್ಲ ಎಂದು ತಿಳಿಸಿದ್ದಾರೆ.

ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಅವರೊಂದಿಗಿನ ಭಿನ್ನಮತದಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ರಷೀದ್ ಮಸೂದ್ ಆಯೋಜಿಸಿದ ಸಾರ್ವಜನಿಕ ಸಭೆಯಲ್ಲಿ ರಾಹುಲ್ ಮಾತನಾಡುತ್ತಿದ್ದರು.

ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಬೇಕು ಎನ್ನುವ ವಿಚಾರ ಬಂದಾಗ ಮುಲಾಯಂ ಸಿಂಗ್ ಯಾದವ್ ಯಾಕೆ ಮೌನವಾಗುತ್ತಾರೆ? ಪಕ್ಷದಲ್ಲಿ ಶೇ.18ರಷ್ಟು ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡುತ್ತೇನೆ ಎಂದು ಮುಲಾಯಂ ಘೋಷಿಸಲಿ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಸವಾಲೆಸೆದರು.

ವೆಬ್ದುನಿಯಾವನ್ನು ಓದಿ