ಲೋಕಾಯುಕ್ತ ದಾಳಿ:ಜಂಟಿ ಕಾರ್ಮಿಕ ಆಯುಕ್ತರ ಬಳಿ 50 ಕೋಟಿ ಆಸ್ತಿ ಪತ್ತೆ

ಶುಕ್ರವಾರ, 31 ಜನವರಿ 2014 (15:19 IST)
PTI
ಕಾರ್ಮಿಕ ಇಲಾಖೆಯ ಜಂಟಿ ಆಯುಕ್ತರಾದ ರವಿಂಕಾಂತ್ ದ್ವಿವೇದಿ ನಿವಾಸದ ಮೇಲೆ ಲೋಕಾಯುಕ್ತರ ವಿಶೇಷ ಪೊಲೀಸ್ ತಂಡ ದಾಳಿ ನಡೆಸಿ 50 ಕೋಟಿ ರೂಪಾಯಿಗಳಿಗೂ ಮೀರಿದ ಆಸ್ತಿಯನ್ನು ವಶಪಡಿಸಿಕೊಂಡಿದೆ.

ಮನೆಯಲ್ಲಿ 1.80 ಕೋಟಿ ರೂಪಾಯಿ ನಗದು ಪತ್ತೆಯಾಗಿದ್ದು ಭಾರಿ ಪ್ರಮಾಣದ ಆಸ್ತಿಯನ್ನು ಸಂಪಾದಿಸಿದ್ದಾರೆ.ಆವರ ಆಸ್ತಿ ಪಾಸ್ತಿ ಬಗ್ಗೆ ಸಂಪೂರ್ಣ ತನಿಖೆ ನಡೆಯುತ್ತಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

ಮಧ್ಯಪ್ರದೇಶದ ಗ್ವಾಲಿಯರ್, ವಿಧಿಶಾ ಮತ್ತು ರೈಸನ್ ಜಿಲ್ಲೆಗಳಲ್ಲಿ ಕೋಟ್ಯಾಂತರ ಬೆಲೆಬಾಳುವ ಸ್ವಂತ ಕಟ್ಟಡಗಳನ್ನು ಹೊಂದಿದ್ದಾರೆ. ನಗರದಲ್ಲಿರುವ ಮನೆಯ ಬೆಲೆ ಸುಮಾರು 2 ಕೋಟಿ ರೂಪಾಯಿಗಳಿಗೂ ಹೆಚ್ಚಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಧ್ಯಪ್ರದೇಶದಲ್ಲಿ ಎಂಪಿಟಿಬಿಸಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಪುತ್ರನಿಗಾಗಿ ಪ್ರಿಂಟಿಂಗ್ ಪ್ರೆಸ್ ಆರಂಭಿಸಿ ಇಲಾಖೆಯಿಂದ ಗುತ್ತಿಗೆ ಕೊಡಿಸಿದ್ದರು. ಗುಡ್‌ಸ್ಟೈ ಎನ್ನುವ ಹೋಟೆಲ್ ಮಾಲೀಕತ್ವ ಕೂಡಾ ದ್ವಿವೇದಿ ಹೆಸರಲ್ಲಿದೆ ಎಂದು ತಿಳಿಸಿದ್ದಾರೆ.

ಲೋಕಾಯುಕ್ತ ವಿಶೇಷ ತಂಡದಲ್ಲಿ ಐವರು ಡಿವೈಎಸ್‌ಪಿ ಮತ್ತು 6 ಮಂದಿ ಇನ್ಸ್‌ಪೆಕ್ಟರ್‌ಗಳನ್ನೊಳಗೊಂಡಿದೆ. ಕೆಲ ವ್ಯಕ್ತಿಗಳು ನೀಡಿದ ದೂರಿನ ಮೇರೆಗೆ ಆರೋಪಿ ರವಿಕಾಂತ್ ದ್ವಿವೇದಿ ನಿವಾಸದ ಮೇಲೆ ದಾಳಿ ನಡೆಸಲಾಗಿದೆ ಎಂದು ಲೋಕಾಯುಕ್ತ ತಂಡದ ಮುಖ್ಯಸ್ಥ ಸಿದ್ದಾರ್ಥ ಚೌಧರಿ ವಿವರಣೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ