ವಯಸ್ಸಿನಿಂದ ವ್ಯಕ್ತಿಯ ಅರ್ಹತೆಯನ್ನು ಅಳೆಯಲು ಸಾಧ್ಯವಿಲ್ಲ: ಆರೆಸ್ಸೆಸ್‌ಗೆ ಆಡ್ವಾಣಿ ತಿರುಗೇಟು

ಬುಧವಾರ, 18 ಡಿಸೆಂಬರ್ 2013 (13:57 IST)
PTI
ಬಿಜೆಪಿ ಪ್ರಧಾನಿ ಅಭ್ಯರ್ಥಿ ಆಯ್ಕೆಯಲ್ಲಿ ಪಕ್ಷದ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿಯವರನ್ನು ಹಿಂದಕ್ಕೆ ತಳ್ಳಿರುವ ಮಧ್ಯೆ, ವಯಸ್ಸು ವ್ಯಕ್ತಿಯ ಯೌವ್ವನ ಅಥವಾ ಮುಪ್ಪನ್ನು ಪರಿಗಣಿಸುವುದಿಲ್ಲ ಎಂದು ಆಡ್ವಾಣಿ ಆರೆಸ್ಸೆಸ್‌ಗೆ ತಿರುಗೇಟು ನೀಡಿದ್ದಾರೆ.

ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಆಡ್ವಾಣಿ, ಒಬ್ಬ ವ್ಯಕ್ತಿಯನ್ನು ಆತನ ವಯಸ್ಸು ಆಧರಿಸಿ ಯುವಕ ಅಥವಾ ವಯಸ್ಸಾದ ವ್ಯಕ್ತಿ ಎಂದು ಹೇಳಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಮಾರಂಭದಲ್ಲಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್, ಭಯ್ಯಾಜಿ ಮತ್ತು ಪ್ರಧಾನ ಕಾರ್ಯದರ್ಶಿ ಸುರೇಶ್ ಸೋನಿ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

ಯೋಗಾ ಗುರು ಬಾಬಾ ರಾಮದೇವ್ ಮತ್ತು ಲೋಕಸಭೆಯ ವಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಪದೇ ಪದೇ ತಮ್ಮನ್ನು ಹಿರಿಯರು ಎಂದು ಸಂಬೋಧಿಸುತ್ತಿರುವುದು ಆಡ್ವಾಣಿಗೆ ಅಸಮಾಧಾನ ಮೂಡಿಸಿದೆ.

ನಾನು ಆರೆಸ್ಸೆಸ್ ಮುಖ್ಯಸ್ಥನಾಗಿರಬಹುದು. ಆದರೆ, ಆಡ್ವಾಣಿ ನನಗಿಂತ ಹಿರಿಯರು.ಕಲಿಯವ ಗುಣವನ್ನು ಹೊಂದಿರುವ ವ್ಯಕ್ತಿಗೆ ಯಾವತ್ತು ಮುಪ್ಪು ಆವರಿಸುವುದಿಲ್ಲ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ