ವಿವಾಹಿತ ಮಹಿಳೆಯ ಮೇಲೆ ಚಲಿಸುತ್ತಿರುವ ಕಾರಿನಲ್ಲೇ ರೇಪ್

ಮಂಗಳವಾರ, 1 ಏಪ್ರಿಲ್ 2014 (11:49 IST)
ನವದೆಹಲಿಯಲ್ಲಿ ಡ್ಯಾನಿಷ್ ಮಹಿಳೆಯ ಮೇಲೆ ಅತ್ಯಾಚಾರ ನಡೆದ ಘಟನೆ ಇನ್ನೂ ನೆನಪಿನಿಂದ ಮಾಸದಿರುವಾಗಲೇ 28 ವರ್ಷ ವಯಸ್ಸಿನ ವಿವಾಹಿತ ಮಹಿಳೆಯ ಮೇಲೆ ಚಲಿಸುತ್ತಿರುವ ಕಾರಿನಲ್ಲೇ ಅವಳ ಸ್ನೇಹಿತ ರೇಪ್ ಮಾಡಿದ ಘಟನೆ ನಡೆದಿದೆ. ಆರೋಪಿಯನ್ನು ಹಿಡಿಯಲು ಪೊಲೀಸರು ಶೋಧ ನಡೆಸಿದ್ದಾರೆ. ಭಾನುವಾರ ಸಂಜೆ ಆನಂದ್ ವಿಹಾರ್ ಬಸ್ ನಿಲ್ದಾಣದ ಬಳಿ ಮಹಿಳೆಯೊಬ್ಬಳು ಅಳುತ್ತಾ ಕುಳಿತಿದ್ದನ್ನು ಪೊಲೀಸರು ಗಮನಿಸಿದರು.ಅವಳನ್ನು ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಿಸಿದಾಗ, ಕಾರಿನಲ್ಲಿ ಅವಳ ಸ್ನೇಹಿತ ಅವನ ಇಬ್ಬರು ಸ್ನೇಹಿತರ ಎದುರಿನಲ್ಲೇ ಅತ್ಯಾಚಾರ ನಡೆಸಿದ್ದಾನೆ ಎಂದು ದೂರಿದ್ದಾರೆ. ಪೊಲೀಸರು ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ರೇಪ್ ನಡೆದಿದ್ದು ಖಚಿತಪಟ್ಟಿದೆ.

ಸ್ನೇಹಿತ ರೇಪ್ ಮಾಡುವ ಯತ್ನವನ್ನು ತಾನು ಪ್ರತಿಭಟಿಸಿದಾಗ ಮೂವರು ಸೇರಿ ತನ್ನನ್ನು ಚೆನ್ನಾಗಿ ಥಳಿಸಿದರು ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ. ತಾನು ಸಂಜೆ ಸ್ನೇಹಿತನನ್ನು ಭೇಟಿಯಾಗಿದ್ದಾಗಿಯೂ ಕಾರ್ಖಾನೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಆಮಿಷ ಒಡ್ಡಿ ಕಾರಿನಲ್ಲಿ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾನೆ ಎಂದು ಮಹಿಳೆ ಹೇಳಿದ್ದಾಳೆ.

ವೆಬ್ದುನಿಯಾವನ್ನು ಓದಿ