ವಿಶ್ವದ ಪ್ರಭಾವಿ ಮಹಿಳೆಯರಲ್ಲಿ ಸೋನಿಯಾ ಗಾಂಧಿಗೆ 3ನೇ ಸ್ಥಾನ

ಗುರುವಾರ, 31 ಅಕ್ಟೋಬರ್ 2013 (15:47 IST)
PTI
ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ ವಿಶ್ವದ ಪ್ರಭಾವಿ ಮಹಿಳೆಯರಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಪುರುಷರಲ್ಲಿ ರಷ್ಯಾದ ಅಧ್ಯಕ್ಷ್ಯ ವ್ಲಾಡಿಮೀರ್ ಪುಟಿನ್ ಅಗ್ರಸ್ಥಾನದಲ್ಲಿದ್ದು ಅಮೆರಿಕದ ಅಧ್ಯಕ್ಷ್ಯ ಬರಾಕ್ ಒಬಾಮಾ ಎರಡನೇ ಸ್ಥಾನ ಪಡೆದಿದ್ದಾರೆ.

ಜರ್ಮನ್ ಚಾನ್ಸಲರ್ ಅಂಜೇಲಾ ಮೆರ್ಕೆಲ್ ಅಗ್ರಸ್ಥಾನ ಪಡೆದಿದ್ದು ಬ್ರೆಜಿಲ್‌‌ನ ಡಿಲ್ಮಾ ರೌಸೆಫ್ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

ಪ್ರಧಾನಿ ಮನಮೋಹನ್ ಸಿಂಗ್ 28ನೇ ಸ್ಥಾನ ಪಡೆದಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ 38ನೇ ಸ್ಥಾನ, ಅರ್ಸೆಲ್ಲರ್ ಮಿತ್ತಲ್ ಮುಖ್ಯಸ್ಥ ಲಕ್ಷ್ಮಿ ಮಿತ್ತಲ್ 51 ನೇ ಸ್ಥಾನ ಪಡೆದಿದ್ದಾರೆ.

ರಷ್ಯಾದ ಅಧ್ಯಕ್ಷ್ಯ ವ್ಲಾಡಿಮೀರ್ ಪುಟಿನ್ ಬರಾಕ್ ಒಬಾಮಾ ಅವರನ್ನು ಹಿಂದಕ್ಕೆ ತಳ್ಳಿ ಮೊದಲ ಬಾರಿಗೆ ಅಗ್ರಸ್ಥಾನ ಪಡೆದಿದ್ದಾರೆ.

ಮೂರನೇ ಸ್ಥಾನದಲ್ಲಿ ಚೀನಾದ ಕಮ್ಯೂನಿಷ್ಛ ಪಕ್ಷದ ಕಾರ್ಯದರ್ಶಿ ಝಿ ಜಿನ್‌ಪಿಂಗ್, ನಾಲ್ಕನೇ ಸ್ಥಾನದಲ್ಲಿ ಪೋಪ್ ಫ್ರಾನ್ಸಿಸ್ ಸ್ಥಾನ ಪಡೆದಿದ್ದಾರೆ.

ಬಿಲ್‌ಗೇಟ್ಸ್ (6ನೇ ಸ್ಥಾನ), ಯುಎಸ್ ರಿಸರ್ವ್ ಬ್ಯಾಂಕ್ ಮುಖ್ಯಸ್ಥ ಬೆನ್.ಎಸ್.ಬೆರ್ನಾನ್ಕೆ (7) ಸೌದಿ ದೊರೆ ಅಬ್ದುಲ್ಲಾ ಬಿನ್ ಅಬ್ದುಲ್ ಅಜೀಜ್ (8ನೇ ಸ್ಥಾನ) ಯುರೋಪ್ ಸೆಂಟ್ರಲ್ ಬ್ಯಾಂಕ್ ಅಧ್ಯಕ್ಷ್ಯ ಮಾರಿಯಾ ಡ್ರಾಘಿ(9ನೇ) ವಾಲ್ಮಾರ್ಟ್ ಮುಖ್ಯಸ್ಥ ಮಿಚೈಲ್ ಡ್ಯೂಕ್(10ನೇ) ಸ್ಥಾನ ಪಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ