ವಿಷಪೂರಿತ ಸೋಯಾಬೀನ್ ಎಣ್ಣೆ ಸೇವಿಸಿ ಮಕ್ಕಳ ಸಾವು

ಶುಕ್ರವಾರ, 19 ಜುಲೈ 2013 (11:47 IST)
ಪಾಟ್ನಾ: ಬಿಹಾರದ ಸರಣ್ ಜಿಲ್ಲೆಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿ 21 ಮಕ್ಕಳು ಸಾವನ್ನಪ್ಪಿದ ದಾರುಣ ಘಟನೆ ಕುರಿತು ವಿಷಪೂರಿತ ಸೋಯಾಬೀನ್ ಎಣ್ಣೆಯಿಂದ ಅಡುಗೆ ತಯಾರಿಸಿದ್ದು ಸಾವಿಗೆ ಕಾರಣವೆಂದು ಶುಕ್ರವಾರ ತೀರ್ಮಾನಿಸಲಾಗಿದೆ.

ಪಾಟ್ನಾ ಮೆಡಿಕಲ್ ಕಾಲೇಜು ಆಸ್ಪತ್ರೆಯಿಂದ ಮರಣೋತ್ತರ ವರದಿ ಪ್ರಕಟವಾಗಿದ್ದು, ಮರಣೋತ್ತರ ವರದಿಯಲ್ಲಿ ವಿಷಪೂರಿತ ಎಣ್ಣೆಯಿಂದ ತಯಾರಿಸಿದ ಆಹಾರ ಸೇವಿಸಿ ಮಕ್ಕಳು ಸಾವನ್ನಪ್ಪಿದ್ದಾರೆಂದು ತಿಳಿಸಿದೆ. ಮಕ್ಕಳ ದೇಹದಲ್ಲಿ ವಿಷದ ಪ್ರಮಾಣ ಎಷ್ಟು ಎಂಬುದು ತಿಳಿದುಬಂದಿಲ್ಲ. ಮಧ್ಯಾಹ್ನದ ಬಿಸಿಯೂಟ ಸೇವಿಸಿದ ಕೂಡಲೇ 8ರಿಂದ 12 ವರ್ಷ ವಯೋಮಿತಿಯ ಮಕ್ಕಳು ಅಸ್ವಸ್ಥರಾಗಿದ್ದರು.ಸರಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಲಾಲು ಪ್ರಸಾದ್ ಯಾದವ್ ನೇತೃತ್ವದ ಆರ್‌ಜೆಡಿ ಮತ್ತು ಬಿಜೆಪಿ ಪಕ್ಷಗಳು ಜಿಲ್ಲಾ ಬಂದ್‌ಗೆ ಕರೆ ನೀಡಿ ಭಾರಿ ಪ್ರತಿಭಟನೆ ನಡೆಸಿದ್ದವು.

ವೆಬ್ದುನಿಯಾವನ್ನು ಓದಿ