ಶೀಲಾ ದೀಕ್ಷಿತ್‌ರ ಜನತಾ ದರ್ಬಾರ್ ಮಾದರಿಯಾಗಲಿ: ಕೇಜ್ರಿವಾಲ್‌ಗೆ ದಿಗ್ವಿಜಯ್ ಸಿಂಗ್

ಶನಿವಾರ, 18 ಜನವರಿ 2014 (12:27 IST)
PTI
ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್‌ರಂತೆ ಪ್ರತಿ ದಿನ ಎರಡು ಗಂಟೆಗಳ ಅವಧಿಗೆ ವಾರದಲ್ಲಿ ಆರು ದಿನ ಜನತೆಯನ್ನು ಭೇಟಿ ಮಾಡಿ ಎಂದು ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಸಲಹೆ ನೀಡಿದ್ದಾರೆ.

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜನತಾ ದರ್ಬಾರ್ ರದ್ದುಗೊಳಿಸಿದ್ದಾರೆ. ಜನತೆಗೆ ಅತ್ಯುತ್ತಮ ಅಡಳಿತ ನೀಡಲು ವ್ಯವಸ್ಥೆ ರೂಪಿಸಲಾಗುತ್ತದೆ. ಆದರೆ, ಏಕಾಂಗಿಯಾಗಿ ಜನಪರ ಯೋಜನೆಗಳನ್ನು ರೂಪಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಜನತಾ ದರ್ಬಾರ್ ರದ್ದುಗೊಳಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಜ್ರಿವಾಲ್, ಮುಂಬರುವ ದಿನಗಳಲ್ಲಿ ಜನತಾ ದರ್ಬಾರ್‌ನಂತಹ ಕಾರ್ಯಕ್ರಮಗಳಿರುವುದಿಲ್ಲ. ಆದರೆ, ಜನತೆ ತಮ್ಮ ಸಂಕಷ್ಟಗಳನ್ನು ಸರಕಾರ ಮುಂದಿಡಲು ಆನ್‌ಲೈನ್ ಅಥವಾ ಪೋಸ್ಟ್ ಸೇವಾ ಸೇರಿದಂತೆ ಹೊಸ ಅವಕಾಶಗಳನ್ನು ಕಲ್ಪಿಸಲಾಗುವುದು ಎಂದು ಹೇಳಿದ್ದರು.

1994ರ ಅವಧಿಯಲ್ಲಿ ತಾವು ಮುಖ್ಯಮಂತ್ರಿಯಾಗಿದ್ದಾಗ ಜನತೆಯ ಕುಂದುಕೊರತೆಗಳನ್ನು ನೀಗಿಸಲು ಪ್ರತ್ಯೇಕ ಇಲಾಖೆಯನ್ನು ರಚಿಸಲಾಗಿತ್ತು. ಇಲಾಖೆಯಲ್ಲಿ ನೋದಣಿಯಾದ ಪ್ರಕರಣಗಳನ್ನು ಆನ್‌ಲೈನ್ ಮೂಲಕ ಪರಿಹರಿಸಲಾಗುತ್ತಿತ್ತು ಎಂದರು.

ವೆಬ್ದುನಿಯಾವನ್ನು ಓದಿ