ಶೀಲಾ ದೀಕ್ಷಿತ್ ವಿರುದ್ಧ ತನಿಖೆಗೆ ಕೇಜ್ರಿವಾಲ್ ಸರ್ಕಾರ ಕೋರಿಕೆ

ಸೋಮವಾರ, 3 ಫೆಬ್ರವರಿ 2014 (19:23 IST)
PR
PR
ದೆಹಲಿ ಸರ್ಕಾರ ಸೋಮವಾರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಪತ್ರ ಬರೆದು ರಾಜಧಾನಿಯಲ್ಲಿ ಅನಧಿಕೃತ ಬಡಾವಣೆಗಳ ನಿರ್ಮಾಣದ ಬಗ್ಗೆ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ವಿರುದ್ಧ ತನಿಖೆ ನಡೆಸಬೇಕೆಂದು ಕೋರಿದೆ. ಅನಧಿಕೃತ ಕಾಲೋನಿಗಳಿಗೆ ಮಾನ್ಯತೆ ನೀಡುವಾಗ ಅಕ್ರಮಗಳು ನಡೆದಿರುವ ಆರೋಪಗಳು ಕೇಳಿಬಂದಿರುವುದರಿಂದ ಲೋಕಾಯುಕ್ತ ಶಿಫಾರಸಿನ ಮೇರೆಗೆ ತನಿಖೆ ನಡೆಸಬೇಕೆಂದು ಸರ್ಕಾರ ಮನವಿ ಮಾಡಿದೆ.ಲೋಕಾಯುಕ್ತ ನೀಡಿದ ವರದಿಗೆ ಸಂಬಂಧಿಸಿ ಮುಖ್ಯಮಂತ್ರಿಗಳ ಶಿಫಾರಸನ್ನು ರಾಷ್ಟ್ರಪತಿ ಕೇಳಿದ್ದರು.

ಈ ಹಿನ್ನೆಲೆಯಲ್ಲಿ ಎಎಪಿ ಸರ್ಕಾರ ತನಿಖೆಗೆ ಶಿಫಾರಸು ಮಾಡಿದೆ.2008ರಲ್ಲಿ ಕಾಂಗ್ರೆಸ್ ಸರ್ಕಾರ ಅನಧಿಕೃತ ಕಾಲೋನಿಗಳಿಗೆ ಹಂಗಾಮಿ ಪ್ರಮಾಣಪತ್ರವನ್ನು ನೀಡಿತ್ತು. 2010 ಜನವರಿಯಲ್ಲಿ ಬಿಜೆಪಿ ದೂರು ನೀಡಿತ್ತು. 2013ರಲ್ಲಿ ಲೋಕಾಯುಕ್ತ ತೀರ್ಪು ನೀಡಿ ಶೀಲಾ ಸರ್ಕಾರದ ವಿರುದ್ಧ ದೋಷಾರೋಪ ಹೊರಿಸಿ ರಾಷ್ಟ್ರಪತಿಗೆ ಪತ್ರ ಬರೆದಿತ್ತು.

ವೆಬ್ದುನಿಯಾವನ್ನು ಓದಿ