ಸಚಿವರ ವಿರುದ್ಧ ಕ್ರಮ ಇಲ್ಲ; ಲೋಕಾಯುಕ್ತಕ್ಕೆ ಮಾಯಾವತಿ

ಸೋಮವಾರ, 27 ಫೆಬ್ರವರಿ 2012 (20:29 IST)
PTI
ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟದ ಹಿರಿಯ ಸಚಿವ ನಾಸೀಮುದ್ದೀನ್ ಸಿದ್ದಿಖಿ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಳ್ಳುವ ಸಾಧ್ಯತೆ ಇಲ್ಲ ಎಂದು ಉತ್ತರ ಪ್ರದೇಶ ಸರ್ಕಾರ ಸೋಮವಾರ ರಾಜ್ಯ ಲೋಕಾಯುಕ್ತಕ್ಕೆ ಮಾಹಿತಿ ನೀಡಿದೆ.

ಮುಖ್ಯಮಂತ್ರಿ ಮಾಯಾವತಿಯ ನಿಕಟವರ್ತಿಯಾಗಿರುವ ಸಚಿವ ಸಿದ್ದಖಿ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿರುವ ಪ್ರಕರಣದ ಕುರಿತಂತೆ ಅವರ ವಿರುದ್ಧ ಸಿಬಿಐ ಮತ್ತು ಎನ್‌ಫೋರ್ಸ್‌ಮೆಂಟ್ ಡೈರೆಕ್ಟರೇಟ್(ಇಡಿ) ತನಿಖೆ ನಡೆಸುವ ರಾಜ್ಯ ಲೋಕಾಯುಕ್ತ ಶಿಫಾರಸು ಮಾಡಿತ್ತು.

ಅಲ್ಲದೇ ಲೋಕಾಯುಕ್ತ ವರದಿ ಆಧಾರದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಸುಮಾರು 20 ಮಂದಿ ಸಚಿವರನ್ನು ವಜಾ ಮಾಡಬೇಕಾಗುತ್ತದೆ. ಅದೇ ರೀತಿ ಹಲವಾರು ದೂರಿನ ಹಿನ್ನೆಲೆಯಲ್ಲಿ ಸಿದ್ದಿಖಿ ವಿರುದ್ಧ ದೂರನ್ನು ದಾಖಲಿಸಿಕೊಂಡಿರುವುದಾಗಿ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಕೆ.ಮೆಹರೋತ್ರಾ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ