ಸತಿ ಪತಿಳಾಗಲು ತಾಳಿ ಕಟ್ಟಬೇಕಿಲ್ಲ - ಮದ್ರಾಸ್ ಹೈಕೋರ್ಟ್

ಬುಧವಾರ, 2 ಏಪ್ರಿಲ್ 2014 (15:00 IST)
ಮದ್ರಾಸ್ ಹೈಕೋರ್ಟ್ ಮಂಗಳವಾರ ನೀಡಿದ ಮಹತ್ವದ ತೀರ್ಪೊಂದರಲ್ಲಿ, ಗಂಡು ಹಾಗೂ ಹೆಣ್ಣು ಪ್ರಾಪ್ತ ವಯಸ್ಸಿನಲ್ಲಿ ಪರಸ್ಪರ ಲೈಂಗಿಕ ಸಂಪರ್ಕವನ್ನು ಹೊಂದಿದಲ್ಲಿ ಅದನ್ನು ವಿವಾಹವೆಂದು ಪರಿಗಣಿಸಬಹುದು ಹಾಗೂ ಅವರನ್ನು ಪತಿ ಹಾಗೂ ಪತ್ನಿಯೆಂದು ಮಾನ್ಯ ಮಾಡಬಹುದೆಂದು ಹೇಳಿದೆ.‘‘ಅವಿವಾಹಿತನಿಗೆ 21 ವರ್ಷ ವಯಸ್ಸಾಗಿದ್ದರೆ ಹಾಗೂ ಅವಿವಾಹಿತೆಗೆ 19 ವರ್ಷ ವಯಸ್ಸಾಗಿದ್ದರೆ, ಅವರಿಗೆ ಸಂವಿಧಾನವು ಖಾತರಿಪಡಿಸಿರುವ ಆಯ್ಕೆಯ ಸ್ವಾತಂತ್ರ ದೊರೆಯುತ್ತದೆ. ಅವರು ತಮ್ಮ ಲೈಂಗಿಕ ಆಕಾಂಕ್ಷೆಯನ್ನು ಪರಸ್ಪರ ಈಡೇರಿಸಿಕೊಂಡಲ್ಲಿ ಈ ಕೃತ್ಯವು ಮುಂದೆ ಆಗಬಹುದಾದ ಪರಿಣಾಮಗಳಿಗೆ ಜವಾಬ್ದಾರಿ ಹೊರಲು ಪೂರ್ಣವಾಗಿ ಬದ್ಧರಾಗಬೇಕಾಗುತ್ತದೆ’’ ಎಂದು ಮುಖ್ಯ ನ್ಯಾಯಮೂರ್ತಿ ಸಿ.ಎಸ್.ಕರ್ಣನ್ ತನ್ನ ಆದೇಶದಲ್ಲಿ ತಿಳಿಸಿದ್ದಾರೆ.

ವಿವಾಹದ ವೇಳೆ ಮಂಗಳಸೂತ್ರ, ಹಾರವಿನಿಮಯ ಹಾಗೂ ಉಂಗುರ ತೊಡಿಸುವಂತಹ ಕ್ರಮಗಳು ಕೇವಲ ಸಾಮಾಜಿಕ ತೋರಿಕೆಗಷ್ಟೇ ಆಗಿವೆಯೆಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆತಮ್ಮಿಬ್ಬರ ನಡುವೆ ಲೈಂಗಿಕ ಸಂಪರ್ಕವಾಗಿರುವ ಬಗ್ಗೆ ಇಬ್ಬರಲ್ಲಿ ಯಾರಾದರೂ ಒಬ್ಬರು ಸಮರ್ಪಕವಾದ ಪುರಾವೆಯನ್ನು ಕೌಟುಂಬಿಕ ನ್ಯಾಯಾಲಯದಲ್ಲಿ ಹಾಜರುಪಡಿಸಿ, ತಮ್ಮ ವೈವಾಹಿಕ ಸಂಬಂಧವನ್ನು ಘೋಷಿಸಿಕೊಳ್ಳಬಹುದೆಂದು ನ್ಯಾಯಾಧೀಶರು ತೀರ್ಪಿನಲ್ಲಿ ಹೇಳಿದ್ದಾರೆ. ಒಮ್ಮೆ ಈ ಘೋಷಣೆಗೆ ನ್ಯಾಯಾಲಯದ ಮಾನ್ಯತೆ ದೊರೆತಲ್ಲಿ, ಈ ಜೋಡಿಯನ್ನು ಸರಕಾರಿ ದಾಖಲೆಗಳಲ್ಲಿ ತಮ್ಮನ್ನು ಸತಿಪತಿಯರೆಂದು ತಾವಾಗಿಯೇ ದೃಢಪಡಿಸಿ ಕೊಳ್ಳಬಹುದೆಂದು ಅವರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ