ಸಬರವಾಲ್ ವಿರುದ್ಧ ವಿಚಾರಣೆಯಾಗಲಿ

ಶನಿವಾರ, 29 ಸೆಪ್ಟಂಬರ್ 2007 (17:00 IST)
ನಿವೃತ್ತ ನ್ಯಾಯಾಧೀಶ ವೈ. ಕೆ ಸಬರವಾಲ್ ವಿರುದ್ಧ ಮಾಧ್ಯಮಗಳಲ್ಲಿ ವರದಿಯಾಗಿರುವ ಆಪಾದನೆಗಳಿಗೆ ಸಂಬಂಧಿಸಿದಂತೆ ತನಿಖೆಯಾಗಬೇಕು ಎಂದು ಸಿಪಿಐ(ಎಂ) ಒತ್ತಾಯಿಸಿದೆ.

ಸಬರವಾಲ್ ಸಾರ್ವಜನಿಕವಾಗಿ ತಾನು ತೆಗೆದುಕೊಂಡ ನಿರ್ಧಾರ ಕ್ರಮಗಳನ್ನು ಸಮರ್ಥಿಸಿಕೊಂಡಿದೆ. ಅಲ್ಲದೇ ಸಬರವಾಲ್ ವಿರುದ್ಧ ಲೇಖನ ಪ್ರಕಟಿಸಿದ (ಮಿಡ್ ಡೆ) ಮಾಧ್ಯಮ ಕೂಡ ತಾನು ಲೇಖನಗಳಲ್ಲಿ ಮಾಡಿರುವ ಆಪಾದನೆಗಳನ್ನು ಸಮರ್ಥಿಸಿಕೊಳ್ಳುವುದಾಗಿ ಹೇಳಿರುವುದರಿಂದ, ಈ ಪ್ರಕರಣದ ಸೂಕ್ತ ತನಿಖೆಯಾಗಬೇಕು ಎಂದು ಸಿಪಿಐ(ಎಂ) ನಾಯಕ ಸಿತಾರಾಮ್ ಯೇಚೂರಿ ಹೇಳಿದ್ದಾರೆ.

ಪಕ್ಷದ ಪಿಪಲ್ಸ್ ಡೆಮಾಕ್ರಸಿ ನಿಯತಕಾಲಿಕೆಯಲ್ಲಿ ಪ್ರಕಟವಾಗಿರುವ ಸಂಪಾದಕೀಯದಲ್ಲಿ ಯೆಚೂರಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಿವೃತ್ತ ಮುಖ್ಯ ನ್ಯಾಯಾಧೀಶರ ವಿರುದ್ಧ ತನಿಖೆಗೆ ಆದೇಶಿಸುವುದರಿಂದ ನ್ಯಾಯಾಂಗದ ಘನತೆ ಇನ್ನಷ್ಟು ಹೆಚ್ಚುತ್ತದೆ. ಕಾರ್ಯಾಂಗದಿಂದ ಆಗುವ ಅಧಿಕಾರದ ದುರುಪಯೋಗ ತಡೆಯುವದು ಅಲ್ಲದೇ ನಾಗರಿಕರ ಮೂಲಭೂತ ಹಕ್ಕುಗಳ ರಕ್ಷಣೆಯನ್ನು ಸಮರ್ಥ ರೀತಿಯಲ್ಲಿ ನಿರ್ವಹಿಸಿದಂತೆ ಆಗುತ್ತದೆ ಎಂದು ಸಂಪಾದಕೀಯದಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.

70ರ ದಶಕದಲ್ಲಿ ಎಡಪಕ್ಷ ನಾಯಕ ಇಎಂಎಸ್ ನಂಬೂದರಿಪಾದ ಅವರು ನ್ಯಾಯಮೂರ್ತಿಗಳನ್ನು ವರ್ಗದ ಆಧಾರದ ಮೇಲೆ ನಿಂದಿಸಿದ್ದರು ಎಂದು ಅವರ ವಿರುದ್ಧ ನ್ಯಾಯಾಂಗ ನಿಂದನೆ ಆರೋಪವನ್ನು ಮಾಡಲಾಗಿತ್ತು. ಮಾಜಿ ಕಾನುನೂ ಖಾತೆ ಸಚಿವ ಪಿ. ಶಿವಶಂಕರ್ ಅವರ ವಿರುದ್ಧ ಕೂಡ ಇದೇ ರೀತಿಯ ಆರೋಪ ಮಾಡಲಾಗಿತ್ತು.

ವೆಬ್ದುನಿಯಾವನ್ನು ಓದಿ