ಸಮ್ಮಿಶ್ರ ಸರಕಾರ ಹೇಗೆ ನಡೆಸಬೇಕು ಎನ್ನುವುದನ್ನು ಪ್ರಧಾನಿ ನೋಡಿ ಕಲಿಯಿರಿ: ಕೇಜ್ರಿವಾಲ್‌ಗೆ ಶಿಂಧೆ

ಸೋಮವಾರ, 30 ಡಿಸೆಂಬರ್ 2013 (14:49 IST)
PTI
ದೆಹಲಿಯಲ್ಲಿ ಕಾಂಗ್ರೆಸ್‌ನ ಬಾಹ್ಯ ಬೆಂಬಲದೊಂದಿಗೆ ಸರಕಾರ ರಚಿಸಿರುವ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ, ಸಮ್ಮಿಶ್ರ ಸರಕಾರ ಹೇಗೆ ನಡೆಸಬೇಕು ಎನ್ನುವುದನ್ನು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ನೋಡಿ ಕಲಿಯಬೇಕು ಎಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಸಲಹೆ ನೀಡಿದ್ದಾರೆ.

ಸಮ್ಮಿಶ್ರ ಸರಕಾರ ಮುನ್ನಡೆಸಿಕೊಂಡು ಹೋಗುವುದು ತುಂಬಾ ಕಷ್ಟದ ಕೆಲಸವಾಗಿದ್ದರಿಂದ ಸಮ್ಮಿಶ್ರ ಸರಕಾರದಲ್ಲಿರುವ ನಾಯಕರು ಯಾವುದೇ ಹೇಳಿಕೆಗಳನ್ನು ನೀಡುವ ಬಗ್ಗೆ ಎಚ್ಚರವಹಿಸಬೇಕು ಎಂದರು.

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಾಂಗ್ರೆಸ್ ಪಕ್ಷದ ಬಾಹ್ಯ ಬೆಂಬಲದೊಂಗಿದೆ ಸರಕಾರ ರಚಿಸಿದ್ದಾರೆ. ಸರಕಾರ ಸುಗಮವಾಗಿ ನಡೆಯಲಿ ಎನ್ನುವುದು ಕಾಂಗ್ರೆಸ್ ಬಯಕೆ. ಆದರೆ, ಕೇಜ್ರಿವಾಲ್ ಮಾತನಾಡುವಾಗ ಎಚ್ಚರಿಕೆ ವಹಿಸುವುದು ಸೂಕ್ತ ಎಂದು ಪರೋಕ್ಷ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಹಲವಾರು ಪಕ್ಷಗಳ ಬೆಂಬಲದೊಂದಿಗೆ ಪ್ರಧಾನಿ ಮನಮೋಹನ್ ಸರಕಾರ ಮುನ್ನಡೆಸುತ್ತಿದ್ದಾರೆ. ಅವರು ತೋರುತ್ತಿರುವ ತಾಳ್ಮೆ ಇತರ ಸಮ್ಮಿಶ್ರ ಸರಕಾರಗಳ ಮುಖ್ಯಸ್ಥರಿಗೆ ಮಾದರಿಯಾಗಬೇಕು ಎಂದು ಕಾಂಗ್ರೆಸ್ ಮುಖಂಡ ಸುಶೀಲ್ ಕುಮಾರ್ ಶಿಂಧೆ ಸಲಹೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ