ಸರ್ಕಾರದ ಖಜಾನೆ ತೂತು : ನಕಲಿ ಶಿಕ್ಷಕರಿಗೂ ಪಿಂಚಣಿ ಸಿಕ್ತು.

ಶುಕ್ರವಾರ, 29 ನವೆಂಬರ್ 2013 (12:49 IST)
PR
PR
ಸರ್ಕಾರದ ಬೇಜವಾಬ್ದಾರಿತನ ಎಷ್ಟಿದೆ ಎಂದರೆ, ಯಾರು ಬೇಕಾದ್ರೂ ಸರ್ಕಾರದ ಖಜಾನೆಯಿಂದ ಸಲೀಸಾಗಿ ಹಣ ಕೊಳ್ಳೆ ಹೊಡೆಯಬಹುದಾಗಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಒಂದು ಘಟನೆ ನಡೆದಿದ್ದು, ರಾಜ್ಯ ಸರ್ಕಾರದ ಲಿಸ್ಟ್‌ನಲ್ಲೇ ಇರದ ನಕಲಿ ಶಿಕ್ಷಕರಿಗೆ ಪಿಂಚಣಿ ಸಿಗ್ತಾ ಇದೆ. ಅದೂ ಒಬ್ಬರು ಇಬ್ಬರು ಅಲ್ಲಾ ಸ್ವಾಮಿ.. ಸಾವಿರಾರು ನಕಲಿ ಶಿಕ್ಷಕರು ಸರ್ಕಾರದ ಪಿಂಚಣಿಯನ್ನು ಪಡೆಯುತ್ತಿದ್ದಾರೆ.!

ಉತ್ತರ ಪ್ರದೇಶದ ಪ್ರಾಥಮಿಕ ಶಿಕ್ಷಣ ಇಲಾಖೆಯಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಪಿಂಚಣಿ ಯಾರಿಗೆ ಹೋಗ್ತಾ ಇದೆ ಎಂದು ಶಿಕ್ಷಣ ಇಲಾಖೆ ದಾಖಲೆಗಳನ್ನು ತೆರೆದು ಪರಿಶೀಲಿಸಿದಾಗ ಇಂಥದ್ದೊಂದು ಭಯಾನಕ ಸತ್ಯ ಹೊರ ಬಿದ್ದಿದೆ. ಶಿಕ್ಷಕರಿಗೆ ಉಪಯೋಗವಾಗಲಿ ಎಂದು ಶಿಕ್ಷಣ ಇಲಾಖೆ ಆನ್‌ಲೈನ್ ಮೂಲಕ ಪಿಂಚಣಿ ವೇತನವನ್ನು ವರ್ಗಾವಣೆ ಮಾಡುವ ವಿನೂತನ ಯೋಜನೆಗೆ ಜಾರಿಗೆ ತಂದಿತ್ತು.

ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ಖದೀಮರು ಆನ್‌ಲೈನ್ ಮೂಲಕ ಸಂದಾಯವಾಗುವ ಹಣವನ್ನು ತಮ್ಮ ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳುತ್ತಿದ್ದರು.

ಕಳೆದ ಹಲವು ವರ್ಷಗಳಿಂದ ಪಿಂಚಣಿಗಾಗಿಯೇ ಹೆಚ್ಚಿನ ಪ್ರಮಾಣದ ಹಣ ಖರ್ಚಾಗುತ್ತಿತ್ತು.. ಇದರಿಂದ ತಲೆ ಕೆಡಿಸಿಕೊಂಡಿದ್ದ ಶಿಕ್ಷಣ ಇಲಾಖೆ ಅಪಾರ ಪ್ರಮಾಣದ ಹಣ ಎಲ್ಲಿ ಪೋಲಾಗುತ್ತಿದೆ ಎಂಬುದನ್ನು ಪತ್ತೆ ಹಚ್ಚಲು ಮುಂದಾದರು. ಈ ಸಮಯದಲ್ಲಿ ಎಲ್ಲಾ ದಾಖಲೆ ಪತ್ರಗಳನ್ನು ಕೆದಕಿದ್ರೂ ಯಾವುದೇ ಮಾಹಿತಿ ಸಿಗಲಿಲ್ಲ. ಕೊನೆಗೆ ಅಂತರ್ಜಾಲದ ಪಿಂಚಣಿ ವರ್ಗಾವಣೆಯ ದಾಖಲೆಗಳನ್ನು ಕೆದಕಿ ನೋಡಿದಾಗ ಭಯಾನಕ ಸತ್ಯ ಹೊರ ಬಿದ್ದಿದೆ. ಶಿಕ್ಷಕರೇ ಅಲ್ಲದ ನಕಲಿ ವ್ಯಕ್ತಿಗಳು ಪಿಂಚಣಿಯನ್ನು ಪಡೆಯುತ್ತಿರುವುದು ಬೆಳಕಿಗೆ ಬಂದಿದೆ.

ಶಿಕ್ಷಣ ಇಲಾಖೆಯವರ ಕೈವಾಡ ಇಲ್ಲದೇ ಇಂತದ್ದೊಂದು ಕೃತ್ಯವನ್ನು ಎಸಗಲು ಸಾಧ್ಯವಿಲ್ಲ.. ಹೀಗಾಗಿ ಈ ಅಕ್ರಮದಲ್ಲಿ ಶಿಕ್ಷಣ ಇಲಾಖೆಯ ಪ್ರಮುಖರು ಭಾಗಿಯಾಗಿದ್ದರೆ ಎಂಬುದರಲ್ಲಿ ಎರಡು ಮಾತಿಲ್ಲ,.. ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ಎಲ್ಲರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಇಲಾಖೆಯ ನಿರ್ದೇಶಕರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ