ಸಿಆರ್‌ಪಿಎಫ್‌ ತಂಡದ ಮೇಲೆ ನಕ್ಸಲ ದಾಳಿ: 20ಕ್ಕೂ ಹೆಚ್ಚು ಯೋಧರ ಬಲಿ

ಮಂಗಳವಾರ, 11 ಮಾರ್ಚ್ 2014 (14:34 IST)
PTI
ಭದ್ರತಾ ಪಡೆ ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಮೂವರು ಸಿಆರ್‌ಎಫ್ ಯೋಧರು ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಛತ್ತೀಸ್‌ಗಡ್‌ನ ಸುಕ್ಮಾ ಜಿಲ್ಲೆಯ ಜಿರಮ್ ಘಾಟಿ ಬಳಿ ಬಳಿ ಭದ್ರತಾ ಸಿಬ್ಬಂದಿಗಳ ಮೇಲೆ ನಕ್ಸಲರು ದಾಳಿ ಮಾಡಿದ್ದಾರೆ. ಈ ವೇಳೆ ಗುಂಡಿನ ಕಾಳಗ ನಡೆದಿದೆ. ನಕ್ಸಲರ ಗುಂಡಿಗೆ ಮೂವರು ಯೋಧರು ಬಲಿಯಾಗಿರುವುದು ದೃಢಪಟ್ಟಿದ್ದು, ಸುಮಾರು 20 ಯೋಧರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ.

ಇಂದು ಬೆಳಿಗ್ಗೆ ಸುಮಾರು 10.30ರ ಸಮಯದಲ್ಲಿ ನಕ್ಸಲರು 20 ಭದ್ರತಾ ಸಿಬ್ಬಂದಿಗಳು ಇದ್ದ ಜಾಗಕ್ಕೆ ಗುಂಡು ಹಾರಿಸಿದ್ದಾರೆ ಹಾಗೂ ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ