ಸಿಎನ್‌ಜಿ ದರ 4.50 ರೂ. ಹೆಚ್ಚಳ: ಕೇಜ್ರಿವಾಲ್‌ಗೆ ಆರಂಭದಲ್ಲೇ ಆಘಾತ

ಶುಕ್ರವಾರ, 27 ಡಿಸೆಂಬರ್ 2013 (11:46 IST)
PR
PR
ನವದೆಹಲಿ: ದೆಹಲಿಯಲ್ಲಿ ಮುಖ್ಯಮಂತ್ರಿ ನಿಯೋಜಿತ ಕೇಜ್ರಿವಾಲ್ ಅವರಿಗೆ ಆರಂಭದಲ್ಲೇ ಆಘಾತ ಉಂಟಾಗಿದೆ. ಆದೆರೆ ನೈಸರ್ಗಿಕ ಅನಿಲದ ದರವನ್ನು 4.50ಪೈಸೆಗೆ ಹೆಚ್ಚಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಇದರಿಂದ ಪ್ರಣಾಳಿಕೆಯಲ್ಲಿನ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗುತ್ತದೋ, ಇಲ್ಲವೋ ಎಂಬ ಆತಂಕ ಕವಿದಿದೆ. ಆದರೆ ಗ್ಯಾಸ್ ದರ ಏರಿಕೆಯ ನಿರ್ಧಾರವನ್ನು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ. ನಾವು ಅಧಿಕಾರಕ್ಕೆ ಬರುವ ಸಂದರ್ಭದಲ್ಲೇ ಸಿಎನ್‌ಜಿ ದರವನ್ನು ಏರಿಸಿರುವುದು ಸಂಶಯಕ್ಕೆ ಎಡೆಮಾಡಿದೆ ಎಂದು ಅವರು ಹೇಳಿದ್ದಾರೆ. ಆಟೋ ಚಾಲಕರು ನೈಸರ್ಗಿಕ ಅನಿಲ ಬೆಲೆ ಏರಿಸಿರುವ ಹಿನ್ನೆಲೆಯಲ್ಲಿ ಆಟೋ ಪ್ರಯಾಣದರ ಏರಿಸಬೇಕೆಂದು ಆಗ್ರಹಿಸಿದ್ದಾರೆ.

ದೆಹಲಿಯ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಸಿಎನ್‌ಜಿ ದರದಲ್ಲಿ ಏರಿಕೆ ಅವಶ್ಯಕವೇ ಎಂದು ಪರಿಶೀಲಿಸುವುದಾಗಿ ಕೇಜ್ರಿವಾಲ್ ಹೇಳಿದ್ದಾರೆ.ನಾವು ಈ ಸಮಸ್ಯೆಯನ್ನು ಎರಡು ದಿನದಲ್ಲಿ ಬಗೆಹರಿಸಲು ಪ್ರಯತ್ನಿಸುತ್ತೇವೆ. ಈ ದರ ವಾಪಸಾತಿಗೆ ಸಾಧ್ಯವೇ ಎಂದು ಪರಿಶೀಲಿಸುತ್ತೇವೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ