ಸಿಬಿಐ ಬಲೆಯಲ್ಲಿ ಯೋಗಾ ಗುರು ಬಾಬಾ ರಾಮದೇವ್

ಮಂಗಳವಾರ, 15 ಅಕ್ಟೋಬರ್ 2013 (14:47 IST)
PTI
ಯೋಗಾ ಗುರು ಬಾಬಾ ರಾಮದೇವ್ ಅವರ ಗುರು ಸ್ವಾಮಿ ಶಂಕರ್ ದೇವ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ರಾಮದೇವ್ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುವ ಸಾಧ್ಯತೆಗಳಿವೆ.

ಬಾಬಾ ರಾಮದೇವ್ ಅವರಿಗೆ ಸಿಬಿಐ ಅಧಿಕಾರಿಗಳು ಕೇಂದ್ರ ಕಚೇರಿಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿತ್ತು. ಅದರಂತೆ ಸಿಬಿಐ ಮುಂದೆ ಹಾಜರಾದ ರಾಮದೇವ್ ವಿಚಾರಣೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮಾಧ್ಯಮ ವರದಿಗಳ ಪ್ರಕಾರ, ಕೇಂದ್ರ ಸರಕಾರ ಸಿಬಿಐ ಬಳಸಿಕೊಂಡು ತಮ್ಮನ್ನು ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಿದೆ ಎಂದು ಬಾಬಾ ರಾಮದೇವ್ ಆರೋಪಿಸಿದ್ದಾರೆ.ಆದರೆ, ರಾಮದೇವ್ ಆರೋಪಗಳನ್ನು ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ ತಿರಸ್ಕರಿಸಿದ್ದಾರೆ.

ಸಿಬಿಐಗೆ ಮತ್ತು ಯಾವುದೇ ರಾಜಕೀಯ ಪಕ್ಷಕ್ಕೆ ಸಂಬಂಧವಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನು ಪಾರದರ್ಶಕವಾಗಿ ನಡೆಸಲಾಗುತ್ತಿದೆ ಎಂದು ಸಿನ್ಹಾ ತಿಳಿಸಿದ್ದಾರೆ.

ಕಳೆದ ಮಾರ್ಚ್ ತಿಂಗಳಲ್ಲಿ ಬಾಬಾ ರಾಮದೇವ್ ಗುರು ಸ್ವಾಮಿ ಶಂಕರ್ ದೇವ್ ಅಪಹರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿತ್ತು. 2007ರ ಜುಲೈ ತಿಂಗಳಲ್ಲಿ ಮುಂಜಾನೆ ವಿಹಾರಕ್ಕೆ ತೆರಳಿದ್ದ ಸ್ವಾಮಿ ಶಂಕರ್ ನಾಪತ್ತೆಯಾಗಿದ್ದರು.

ವೆಬ್ದುನಿಯಾವನ್ನು ಓದಿ