ಸಿಮಿಯ ಸುರಕ್ಷಿತ ತಾಣವಾಗಿ ಹೊರಹೊಮ್ಮುತ್ತಿರುವ ಕೇರಳ

ಸೋಮವಾರ, 18 ಆಗಸ್ಟ್ 2008 (11:12 IST)
ಸ್ಟೂಟೆಂಡ್ ಆಫ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ(ಸಿಮಿ)ದ ದಕ್ಷಿಣ ಭಾಗದ ಕೊಂಡಿಯನ್ನು ಗುಜರಾತ್ ಪೊಲೀಸರು ಬಹಿರಂಗಗೊಳಿಸಿದ ನಂತರ, ಕೇರಳವು ಸಿಮಿಯ ಸುರಕ್ಷಿತ ತಾಣವಾಗಿ ಹೊರಹೊಮ್ಮುತ್ತಿದೆ ಎಂದು ಕೇರಳ ರಾಜ್ಯ ಆಡಳಿತವು ಹೇಳಿದೆ.

ಕೇರಳ ಅರಣ್ಯಗಳನ್ನು ಸುರಕ್ಷತಾ ತಾಣವನ್ನಾಗಿ ಕಂಡುಕೊಂಡಿರುವ ಮಾವೋವಾದಿಗಳೂ, ಸಿಮಿ ಸಂಘಟನೆಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆಯು ಹೇಳಿದೆ.

ಸಂಪೂರ್ಣ ಪರಿಸ್ಥಿತಿಯನ್ನು ತಿಳಿದುಕೊಂಡು ಮಾನವ ಹಕ್ಕುಗಳ ಕಾರ್ಯಕರ್ತರು ತಮ್ಮ ಕಳವಳ ವ್ಯಕ್ತಪಡಿಸಬೇಕು ಎಂದಿರುವ ರಾಜ್ಯ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್, ಇಂತಹ ಬೃಹತ್ ಸಮಸ್ಯೆಗೆ ಸಂಬಂಧಿಸಿದಂತೆ ಯಾವುದೇ ಸಡಿಲಿಕೆಯು ಮತ್ತಷ್ಟು ಸಮಸ್ಯೆಗಳಿಗೆ ಹಾದಿಯಾಗುತ್ತದೆ ಎಂದು ಹೇಳಿದ್ದಾರೆ.

ಏತನ್ಮಧ್ಯೆ, ಸಿಮಿಗೆ ಕೇರಳೊಂದಿಗೆ ಬಲವಾದ ಸಂಬಂಧ ಹೊಂದಿದ್ದು, ಡಿಸೆಂಬರ್ 2007ರಲ್ಲಿ ಅಲುವಾದಲ್ಲಿ ಸಿಮಿಯು ಪ್ರಮುಖ ಸಭೆಯನ್ನು ನಡೆಸಿತ್ತು ಎಂದು ಹೇಳಲಾಗಿದೆ. ಅಲ್ಲದೆ, ಈ ಸಭೆಯಲ್ಲಿ ಸಿಮಿ ಮುಖ್ಯಸ್ಥ ಸಫ್ದರ್ ನಾಗೋರಿ ಮತ್ತು ಆತನ ಪಿಎ ಶಿಬ್ಲಿ ಎಂಬಾತನೂ ಪಾಲ್ಗೊಂಡಿದ್ದ ಎಂದು ವರದಿಗಳು ಹೇಳಿವೆ.

ವೆಬ್ದುನಿಯಾವನ್ನು ಓದಿ