ಸಿ ವೋಟರ್‌ ಸಮೀಕ್ಷೆ : ಬಿಜೆಪಿಗೆ ಜೈ; ಕಾಂಗ್ರೆಸ್‌ಗೆ "ಕೈ"

ಗುರುವಾರ, 17 ಅಕ್ಟೋಬರ್ 2013 (17:24 IST)
PTI
PTI
ವರದಿ : ಶೇಖರ್‌ ಪೂಜಾರಿ

2014 ರ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ವಿವಿಧ ತಂಡಗಳು ಸಮೀಕ್ಷೆಗಳನ್ನು ನಡೆಸುತ್ತಿವೆ. ಈ ಪೈಕಿ ನಡೆದ ಸಮೀಕ್ಷೆಯೊಂದರ ಪ್ರಕಾರ 2014 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಲಿದೆ. ಮುಂದಿನ ಚುನಾವಣೆಯಲ್ಲಿ ಸ್ವತಃ ಬಿಜೆಪಿ ಪಕ್ಷವೊಂದೇ ಕನಿಷ್ಟ 162 ಸೀಟುಗಳನ್ನು ಗೆಲ್ಲಲಿದೆ ಎಂದು ಈ ಸಮೀಕ್ಷೆ ಹೇಳಿದೆ. ಅಷ್ಟೆ ಅಲ್ಲ, ಪ್ರಸ್ತುತ ಕಾಂಗ್ರೆಸ್‌ ಸರ್ಕಾರ ಕೇವಲ 102 ಸೀಟುಗಳನ್ನು ಗಿಟ್ಟಿಸಿಕೊಳ್ಳಲು ಹರ ಸಹಾಸ ಪಡಬೇಕಾಗುತ್ತದೆ ಎಂದು ಈ ಸಮೀಕ್ಷೆ ಹೇಳುತ್ತದೆ.

ನರೆಂದ್ರ ಮೋದಿಯ ಚಿಂತನೆಗಳಿಗೆ ರಾಷ್ಟ್ರದ ಪ್ರಜೆಗಳು ಹೆಚ್ಚು ಆಕರ್ಷಿತರಾಗಿದ್ದು, ಜನರ ಮೊದಲ ಆಯ್ಕೆ ನರೆಂದ್ರ ಮೋದಿಯೇ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಜೆಪಿ ಪಕ್ಷವು 2014 ರ ಲೋಕಸಭಾ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಲಿದ್ದು ಸರ್ಕಾರ ರಚಿಸಲು ಬೇಕಾದಷ್ಟು ಸೀಟುಗಳನ್ನು ಸುಲಭವಾಗಿ ಪಡೆದುಕೊಳ್ಳಲಿದೆ.

ಯಾವ ಪಕ್ಷಕ್ಕೆ ಎಷ್ಟು ಸೀಟು? ಮುಂದಿನ ಪುಟದಲ್ಲಿದೆ ಮೋದಿ ಮೋಡಿ...

PTI
PTI
ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರೀಕೂಟವು ಒಟ್ಟು 186 ಸೀಟುಗಳನ್ನು ಗೆಲ್ಲುವ ಸಾಧ್ಯತೆಗಳಿವೆ. ಮತ್ತು ಪ್ರಸ್ತುತ ಯುಪಿಎ ಮೈತ್ರೀಕೂಟವು ಕೇವಲ 117 ಸೀಟುಗಳನ್ನು ಗೆಲ್ಲಲು ಹರ ಸಾಹಸ ಪಡಬೇಕಾದ ಅಗತ್ಯವಿದೆ ಎಂಬುದಾಗಿ ಈ ವರದಿ ಹೇಳುತ್ತದೆ. ಇನ್ನು ಉಳಿದಂತೆ ಇತರೇ ಒಟ್ಟು 240 ಸೀಟುಗಳನ್ನು ಪಡೆದುಕೊಳ್ಳಲಿದೆ ಎಂಬ ಮಾಹಿತಿ ಈ ಸಮೀಕ್ಷೆಯಿಂದ ತಿಳಿದುಬಂದಿದೆ.

ಟೈಮ್ಸ್‌ ನೌ ಮತ್ತು ಸಿ ವೋಟರ್‌ ಸಮೀಕ್ಷೆಯ ವರದಿಗಳ ಪ್ರಕಾರ 2014 ರ ಲೋಕಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್‌ ಮತ್ತು ಎಡರಂಗ ಅಥವ ಎಸ್‌ಪಿ, ಬಿಎಸ್‌ಪಿ ಪಕ್ಷಗಳು ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿವೆ. ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ ತನ್ನ ಪ್ರಭಾವವನ್ನು ಕಳೆದುಕೊಳ್ಳುವ ಸಾಧ್ಯತೆಗಳಿದ್ದು ಜನರು ಎಐಡಿಎಂಕೆ ಪಕ್ಷಕ್ಕೆ ಓಟು ಒತ್ತುವ ಸಾಧ್ಯತೆಗಳಿವೆ. ಮುಂದಿನ ಚುನಾವಣೆಯಲ್ಲಿ ಬಿಎಸ್‌ಪಿ 32 ಎಐಡಿಎಂಕೆ 28 ಮತ್ತು ಎಸ್‌ಪಿ 25 ಹಾಗೂ ತೃಣಮೂಲ ಕಾಂಗ್ರೆಸ್‌ 23 ಸೀಟುಗಳನ್ನು ಪಡೆಯುವ ಸಾಧ್ಯತೆಗಳಿವೆ.

ಕರ್ನಾಟಕದಲ್ಲಿ ಬಿಜೆಪಿ ಗತಿ ಏನು? ಮುಂದಿನ ಪುಟದಲ್ಲಿದೆ ಹೆಚ್ಚಿನ ಮಾಹಿತಿ....

PTI
PTI
ಕರ್ನಾಟಕದಲ್ಲಿ ಕಾಂಗ್ರೆಸ್‌ ಅಬ್ಬರ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಸಿಎಂ ಸಿದ್ರಾಮಯ್ಯನವರ ಪ್ರಭಾವ ಕರ್ನಾಟಕದಲ್ಲಿ ಹೆಚ್ಚಾಗಿದ್ದು, ಈ ಕಾರಣಕ್ಕಾಗಿ ಕರ್ನಾಟಕದ ಜನರು ಕಾಂಗ್ರೆಸ್‌ನತ್ತ ಮುಖ ಮಾಡುವ ಸಾಧ್ಯತೆಗಳಿವೆ. ಆದಾಗ್ಯೂ ಕರ್ನಾಟಕದಲ್ಲಿ ಗರಿಷ್ಟ ಎಂದರೆ 11 ಸೀಟುಗಳನ್ನು ಕಾಂಗ್ರೆಸ್‌ ಗೆಲ್ಲಬಹುದು ಎಂದು ಅಂದಾಜಿಸಲಾಗಿದೆ. ಇನ್ನುಳಿದಂತೆ ಎಲ್ಲಾ ಸೀಟುಗಳು ಬಿಜೆಪಿ ಪಾಲಾಗಲಿವೆ ಎಂದು ಹೇಳಲಾಗುತ್ತಿದೆ.

ಆಂಧ್ರದಲ್ಲಿ ಕಾಂಗ್ರೆಸ್‌ ಧೂಳೀಪಟ..?

ಇನ್ನು ಯುಪಿಎ ಸರ್ಕಾರಕ್ಕೆ ಈ ಚುನಾವಣೆ ತೀವ್ರ ಮುಖಭಂಗ ಉಂಟು ಮಾಡುವ ಸಾಧ್ಯತೆಗಳಿವೆ. ಕಾಂಗ್ರೆಸ್‌ ಪಕ್ಷದ ಭದ್ರಕೋಟೆಯಾಗಿರುವ ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್‌ ನುಚ್ಚು ನೂರಾಗಿದೆ. ಇಲ್ಲಿನ ಜನರು ಪ್ರಾದೇಶಿಕ ಪಕ್ಷಕ್ಕೆ ಹೆಚ್ಚಿನ ಒತ್ತು ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಜಗನ್‌ ಮೋಹನ್‌ ರೆಡ್ಡಿ ನೇತೃತ್ವದ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷವು 33 ಸೀಟುಗಳನ್ನು ಪಡೆಯುವ ಸಾಧ್ಯತೆಗಳಿದ್ದು, ಅದನ್ನು ಬಿಟ್ಟರೆ, ತೆಲಂಗಾಣ ರಾಷ್ಟ್ರ ಸಮಿತಿ 13 ಸೀಟುಗಳನ್ನು ಗೆಲ್ಲುವುದರ ಮೂಲಕ ಆಂಧ್ರ ರಾಜಕಾರಣದಲ್ಲಿ ಮಿಂಚಿನ ಸಂಚಲನ ಮೂಡಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಒಟ್ಟಾರೆಯಾಗಿ ಕಾಂಗ್ರೆಸ್‌ ಪಾಲಿಗೆ ಆಂಧ್ರದ ಕೋಟೆ ಬಾಗಿಲು ಮುಚ್ಚಲಾಗಿದೆ ಎಂಬ ಸಂದೇಶವನ್ನು ಸಿವೋಟರ್‌ ಸಮೀಕ್ಷೆ ಹೊರ ಹಾಕಿದೆ. ಅಷ್ಟೆ ಅಲ್ಲ, ಉತ್ತರ ಪ್ರದೇಶ, ರಾಜಸ್ಥಾನ, ಕೇರಳ ರಾಜ್ಯಗಳಲ್ಲಿಯೂ ಕಾಂಗ್ರೆಸ್‌ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜಸ್ಥಾನದಲ್ಲಿ ಗರಿಷ್ಟ ಎಂದರೆ ಕಾಂಗ್ರೆಸ್‌ ಐದು ಸೀಟುಗಳನ್ನು ಮಾತ್ರವೇ ಗೆಲ್ಲಬಹುದಾಗಿದೆ. ಇನ್ನು ಉಳಿದ 15 ಸೀಟುಗಳನ್ನು ಕಾಂಗ್ರೆಸ್‌ ಕಳೆದುಕೊಳ್ಳಲಿದ್ದು, ಅವೆಲ್ಲವೂ ಬಿಜೆಪಿ ಪಾಲಿಗೆ ಒಲಿಯಲಿದೆ.

ದೇಶದ ವಿವಿಧ ರಾಜ್ಯಗಳಲ್ಲಿನ ಜನರ ಅಭಿಪ್ರಾಯಗಳನ್ನು ಕ್ರೋಢೀಕರಿಸಿದ ನಂತರ ಒಟ್ಟಾರೆಯಾಗಿ ಬಿಜೆಪಿ ಪಕ್ಷದ ಅಬ್ಬರ ಹೆಚ್ಚಾಗಿದೆ. ಮೋದಿಯ ಮೋಡಿ ಎಲ್ಲೆಲ್ಲೂ ರಂಗೆರಿದೆ. ಹೀಗಾಗಿ ಮೋದಿ ನೇತೃತ್ವದ ಬಿಜೆಪಿ ಪಕ್ಷಕ್ಕೆ ರಾಷ್ಟ್ರದ ಜನರು ಓಟು ಒತ್ತಲಿದ್ದಾರೆ, ಮತ್ತು ಸದ್ಯದ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರಕ್ಕೆ 2014ರ ಲೋಕಸಭಾ ಚುನಾವಣೆ ತೀವ್ರ ಮುಖಭಂಗವನ್ನು ಉಂಟು ಮಾಡಲಿದೆ ಎಂದು ಈ ಸಮೀಕ್ಷೆಯ ಒಟ್ಟಾರೆ ವರದಿಯಾಗಿದೆ.

ವೆಬ್ದುನಿಯಾವನ್ನು ಓದಿ