ಸೀಟಿಗಾಗಿ ಬಿಜೆಪಿ ಮತ್ತು ತೆಲುಗುದೇಶಂ ನಡುವೆ ಮತಭೇದ

ಬುಧವಾರ, 9 ಏಪ್ರಿಲ್ 2014 (12:28 IST)
ತೆಲಂಗಾಣದಲ್ಲಿ ಎಪ್ರೀಲ್ 30 ರಂದು ನಡೆಯಲಿರುವ ಚುನಾವಣೆಗೆ ಹೆಚ್ಚಿನ ದಿನಗಳು ಬಾಕಿ ಇಲ್ಲದಿರುವ ಈ ಸಮಯದಲ್ಲೂ ತೆಲುಗುದೇಶಂ ಮತ್ತು ಬಿಜೆಪಿ ನಡುವೆ ಇದ್ದ ಕೆಲವು ಸೀಟುಗಳ ಹಂಚಿಕೆಗೆ ಸಂಬಂಧಿಸಿದ ಮತಭೇದ ಇನ್ನೂ ದೂರವಾಗಿಲ್ಲ.
PTI

ಸೂತ್ರಗಳ ಪ್ರಕಾರ ಎರಡು ಪಕ್ಷಗಳು ಸ್ಪರ್ಧಿಸಲು ಬಯಸುವ ಕೆಲವು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಇರುವ ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸಲು ಪ್ರಯತ್ನ ನಡೆಸುತ್ತಿವೆ.

ಬಿಜೆಪಿ ವಿಧಾನಸಭೆಯ 47, ಮತ್ತು ಲೋಕಸಭೆಯ ಎಂಟು ಕ್ಷೇತ್ರಗಳಿಗೆ ಉಮೇದುವಾರರನ್ನು ಪ್ರಕಟಿಸಬೇಕಾಗಿದ್ದು, ಟಿಡಿಪಿ 45 ವಿಧಾನಸಭಾ, 8 ಲೋಕಸಭಾ ಕ್ಷೇತ್ರಗಳಿಗೆ ತಮ್ಮ ಅಭ್ಯರ್ಥಿಗಳನ್ನುಘೋಷಿಸ ಬೇಕಾಗಿದೆ.

ಟಿಡಿಪಿ ತನ್ನ ಮೊದಲ ಪಟ್ಟಿಯಲ್ಲಿ ವಿಧಾನಸಭೆಯ 27 ಸ್ಥಾನಗಳಿಗೆ ಮತ್ತು ಲೋಕಸಭೆಯ ಮೂರು ಸ್ಥಾನಗಳಿಗೆ ಅಭ್ಯರ್ಥಿಗಳು ಘೋಷಿಸಿದೆ.

ಸೀಟಿಗಾಗಿ ಪ್ರಾರಂಭವಾಗಿರುವ ಭಿನ್ನಾಭಿಪ್ರಾಯಗಳನ್ನು ದೂರ ಮಾಡಲು ಎರಡು ಪಕ್ಷಗಳ ನಡುವೆ ಮಾತುಕತೆ ನಡೆಯುತ್ತಿದೆ. ತೆಲುಗುದೇಶಂ ಪ್ರಮುಖ ಚಂದ್ರಬಾಬು ನಾಯ್ಡು ಮತ್ತು ಬಿಜೆಪಿಯ ತೆಲಂಗಾಣ ವಿಭಾಗದ ನಾಯಕ ಜಿ. ಕಿಶಾನ್ ರೆಡ್ಡಿ ನಡುವೆ ನಿನ್ನೆ ತಡರಾತ್ರಿಯವರೆಗೆ ಸಭೆ ನಡೆಯಿತು ಎಂದು ವರದಿಯಾಗಿದೆ.

ವೆಬ್ದುನಿಯಾವನ್ನು ಓದಿ