ಸುಖ ಸರ್ಕಾರಕ್ಕೆ ಕೇಂದ್ರದ ಐದು ಮಿತವ್ಯಯ ಸೂತ್ರಗಳು

ಬುಧವಾರ, 18 ಸೆಪ್ಟಂಬರ್ 2013 (20:30 IST)
PR
PR
ನವದೆಹಲಿ: ಇಲಾಖೆಗಳಲ್ಲಿ ಉನ್ನತ ಅಧಿಕಾರಿಗಳನ್ನು ಬಿಟ್ಟರೆ, ಯಾವುದೇ ಹೊಸ ನೇಮಕಾತಿಗಳಿಲ್ಲ, ಪಂಚತಾರಾ ಹೊಟೆಲ್‌ಗಳಲ್ಲಿ ಸೆಮಿನಾರ್, ಮೀಟಿಂಗ್‌ಗಳಿಗೆ ನಿಷೇಧ, ಹೊಸ ವಾಹನಗಳ ಖರೀದಿಯಿಲ್ಲ, ವಿಮಾನದ ಎಕಾನಮಿ ಕ್ಲಾಸ್‌ನಲ್ಲಿ ಮಾತ್ರ ಪ್ರಯಾಣ- ಆರ್ಥಿಕ ಬಿಕ್ಕಟ್ಟಿನಿಂದ ತೀವ್ರವಾಗಿ ತತ್ತರಿಸುತ್ತಿರುವ ಕೇಂದ್ರ ಸರ್ಕಾರ ಮಿತವ್ಯಯಕ್ಕೆ ಹಲವಾರು ಸೂತ್ರಗಳನ್ನು ಪ್ರಕಟಿಸಿದೆ. ವಿತ್ತೀಯ ಶಿಸ್ತನ್ನು ಪಾಸಿಲು ಈ ಕ್ರಮಗಳು ಅಗತ್ಯವಾಗಿದೆ ಎಂದು ಹಣಕಾಸು ಸಚಿವಾಲಯದ ಹೇಳಿಕೆ ತಿಳಿಸಿದೆ.ಯೋಜನೇತರ ವೆಚ್ಚದಲ್ಲಿ ಶೇ. 10ರಷ್ಟು ಕಡಿತವು ಮಿತವ್ಯಯ ಕ್ರಮಗಳಲ್ಲಿ ಸೇರಿದೆ.

ಅದರಲ್ಲಿ ಬಡ್ಡಿ ಪಾವತಿ, ಸಾಲ ಪಾವತಿ, ರಕ್ಷಣಾ ಬಜೆಟ್, ವೇತನಗಳು ಮತ್ತು ಪಿಂಚಣಿ ಬಿಲ್‌ಗೆ ವಿನಾಯಿತಿ ನೀಡಲಾಗಿದೆ.ಆದರೆ ಮಿತವ್ಯಯ ಕ್ರಮಗಳಿಂದ ಸರ್ಕಾರ ಎಷ್ಟು ಉಳಿಸುತ್ತದೆ ಎನ್ನುವುದು ಸ್ಪಷ್ಟವಾಗಿಲ್ಲ. ಕಳೆದ ವರ್ಷ ಕೂಡ ಸರ್ಕಾರ ಇದೇ ರೀತಿಯ ಮಿತವ್ಯಯ ಕ್ರಮಗಳನ್ನು ಪ್ರಕಟಿಸಿತ್ತು.

ವೆಬ್ದುನಿಯಾವನ್ನು ಓದಿ