ಸುನಂದಾ ಪುಷ್ಕರ್ ಯಾರು? ಆಕೆಯ ಹಿನ್ನಲೆ ಮತ್ತು ಹಗರಣಗಳ ನೋಟ

ಶನಿವಾರ, 18 ಜನವರಿ 2014 (12:19 IST)
PR
ಕೇಂದ್ರ ಸಚಿವ ಶಶಿ ತರೂರ್ ಅವರನ್ನು 2010ರಲ್ಲಿ ವಿವಾಹವಾದ ನಂತರ ಸಾರ್ವಜನಿಕರ ಗಮನ ಸೆಳೆದ ಸುನಂದಾ ಪುಷ್ಕರ್, ಕೊಚ್ಚಿ ಟಸ್ಕರ್ಸ್ ಐಪಿಎಲ್ ತಂಡದ ವಿವಾದದಲ್ಲಿ ಕೇಂದ್ರ ಬಿಂದುವಾಗಿದ್ದರು.


PR
ಶಶಿ ತರೂರ್ ಅವರನ್ನು ವಿವಾಹವಾಗುವ ಮುಂಚೆ ಸುನಂದಾ ದುಬೈ ಮೂಲದ ರಿಯಲ್ ಎಸ್ಟೇಟ್‌ ಕಂಪೆನಿ ಟೆಕಾಂನ ಮಾರಾಟ ವಿಭಾಗದ ನಿರ್ದೇಶಕರಾಗಿದ್ದರು. ಕೊಚ್ಚಿ ಐಪಿಎಲ್ ತಂಡದ ಖರೀದಿಗಾಗಿ 70 ಕೋಟಿ ರೂಪಾಯಿಗಳಷ್ಟು ಹೂಡಿಕೆ ಮಾಡಿದ್ದರು. ಸುನಂದಾ ಹೂಡಿಕೆ ಮಾಡಿರುವುದು ಶಶಿ ತರೂರ್‌ ಕೈವಾಡವಿದೆ ಎನ್ನುವ ವಿವಾದ ಕೋಲಾಹಲ ಸೃಷ್ಟಿಸಿತ್ತು.

PR
ಕೊಚ್ಚಿ ಐಪಿಎಲ್ ತಂಡದ ಖರೀದಿಗಾಗಿ ಸುನಂದಾಳಿಗೆ ಶಶಿ ತರೂರ್ ತಮ್ಮ ಪ್ರಭಾವ ಬಳಸಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿದ್ದವು. ಆದರೆ, ಸುನಂದಾ ಮಾರುಕಟ್ಟೆ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಕೇರಳ ಸೇರಿದಂತೆ ಮಧ್ಯಪ್ರಾಚ್ಯ ರಾಷ್ಟ್ರಗಳ ಬಗ್ಗೆ ಸಂಪೂರ್ಣ ಮಾಹಿತಿಯಿದೆ ಎಂದು ತರೂರ್ ಆರೋಪಗಳನ್ನು ತಳ್ಳಿಹಾಕಿದ್ದರು.

ವೆಬ್ದುನಿಯಾವನ್ನು ಓದಿ