ಸೆಕ್ಸ್ ಟಾಯ್ಸ್‌ಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಸೋಮವಾರ, 31 ಮಾರ್ಚ್ 2014 (19:16 IST)
ಪಾವು, ಪೋನಿ ಮತ್ತು ಗಾಲೋರಿ ಎನ್ನುವ ಶಬ್ದಗಳು ಸಾಮಾನ್ಯ ಜನತೆಗೆ ಅರ್ಥವಾಗುವುದಿಲ್ಲ. ಆದರೆ, ಸೆಕ್ಸ್ ಟಾಯ್ಸ್‌ಗಳನ್ನು ಮಾರಾಟ ಮಾಡುವ ವ್ಯಾಪಾರಿಗಳು ಬಳಸುವ ಕೋಡ್‌ವರ್ಡ್‌ಗಳಾಗಿವೆ.

ನವದೆಹಲಿಯ ಪಾಲಿಕಾ ಮಾರುಕಟ್ಟೆಯಲ್ಲಿ 26 ವರ್ಷ ವಯಸ್ಸಿನ ಆಶೀಶ್ ಗುಪ್ತಾ ಎನ್ನುವ ಅಂಗಡಿಯಾತನಿಂದ 21 ಎಲೆಕ್ಟ್ರಾನಿಕ್ ಸೆಕ್ಸ್ ಟಾಯ್ಸ್, ಮೆಡಿಸಿನ್, ನೀಲಿಚಿತ್ರಗಳು ಮತ್ತು ಇತರ ಅಸಭ್ಯ ದೃಶ್ಯಗಳನ್ನು ಹೊಂದಿರುವ ಹಲವಾರು ಸಿಡಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಗ್ರಾಹಕರನ್ನು ಆಕರ್ಷಿಸಲು ಮತ್ತು ಪೊಲೀಸರಿಗೆ ತಿಳಿಯದಂತಾಗಲು ಗುಪ್ತಾ ಕೋಡ್‌ವರ್ಡ್‌ಗಳನ್ನು ಬಳಸುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಚಾಕೋಸ್ ಅಂದರೆ ಉತ್ತಮ ವಸ್ತು ಎಂದರ್ಥ. ಪುರುಷ ಗಿರಾಕಿಗಳನ್ನು ಪಾವು ಮತ್ತು ಮಹಿಳಾ ಗಿರಾಕಿಗಳನ್ನು ಪೋನಿ ಎಂದು ಸಂಬೋಧಿಸುತ್ತಿದ್ದನು. ಯಾವುದೇ ತೊಂದರೆ ಎದುರಾದಲ್ಲಿ ಗಾಲೋರಿ ಎನ್ನುವ ಶಬ್ದ ಬಳಸುತ್ತಿದ್ದನು ಎನ್ನಲಾಗಿದೆ.

ಪುರುಷನ ಅಂಗಕ್ಕೆ ಅಕೇಲ್ ರಾಮ್ ಎನ್ನುವ ಕೋಡ್‌ವರ್ಡ್ ಬಳಸುತ್ತಿದ್ದನು. ಮಹಿಳೆ ಅಂಗಕ್ಕೆ ಲೇವೇಡಿ ಎನ್ನುವ ಶಬ್ದ ಬಳಸುತ್ತಿದ್ದನು. ನೀಲಿಚಿತ್ರಗಳಿಗೆ ಟಿಆರ್‌ ಮತ್ತು ಲಂಗತಾರ್ ಎನ್ನುವ ಕೋಡ್‌ವರ್ಡ್‌ಗಳನ್ನು ಬಳಸಲಾಗುತ್ತಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ