ಸೋನಿಯಾ ಮಹಿಳೆಯರ ವಿಷಯಗಳ ಬಗ್ಗೆ ರಾಷ್ಟ್ರದ ದಾರಿ ತಪ್ಪಿಸುತ್ತಿದ್ದಾರೆ: ಮೋದಿ

ಶನಿವಾರ, 5 ಏಪ್ರಿಲ್ 2014 (17:57 IST)
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮೇಲೆ ಮತ್ತೊಮ್ಮೆ ನೇರ ದಾಳಿ ನಡೆಸಿರುವ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕಾಂಗ್ರೆಸ್ ನಾಯಕಿ ಮಹಿಳೆಯರ ಸುರಕ್ಷತೆ ಬಗ್ಗೆ ದೇಶಾದ್ಯಂತ ಮಹಿಳೆಯರ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿದ್ದಾರೆ.
PTI

ನಾಗಪುರದಿಂದ ಹಿಂತಿರುಗಿ ಹೆಲಿಕಾಪ್ಟರ್ ಮೂಲಕ ನೇರವಾಗಿ ಚಂದ್ರಾಪುರಕ್ಕೆ ತೆರಳಿ ಚಂದ್ರಾಪುರದ ಬಿಜೆಪಿ ಅಭ್ಯರ್ಥಿ ಹನ್ಸರಾಜ್ ಮತ್ತು ಗಡ್ಚಿರೋಲಿ ಅಭ್ಯರ್ಥಿ ಅಶೋಕ ನೆಟೆಯವರ ಪರವಾಗಿ ಪ್ರಚಾರ ಸಭೆಯನ್ನು ಉದ್ದೇಶಿಸಿ ಮೋದಿ ಮಾತನಾಡುತ್ತಿದ್ದರು.

"ದೇಶದ 10 ರಾಜ್ಯಗಳಲ್ಲಿ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ಏರಿಕೆಯಾಗಿದ್ದು, ಅವುಗಳಲ್ಲಿ 7 ರಾಜ್ಯಗಳು ಕಾಂಗ್ರೆಸ್ ಆಳ್ವಿಕೆಯಲ್ಲಿವೆ.ವಿಕೃತ ಸತ್ಯ ಹೇಳುವುದರ ಮೂಲಕ ಸೋನಿಯಾ ಮ್ಯಾಡಮ್ ದೇಶದ ಮಹಿಳೆಯರು ದಿಕ್ಕು ತಪ್ಪಿಸುತ್ತಿದ್ದಾರೆ" .

"ನಿರ್ಭಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರವ್ಯಾಪಿ ಪ್ರತಿಭಟನೆಯಾದ ಮೇಲೆ ಕಾಂಗ್ರೆಸ್ ಸರ್ಕಾರ 'ನಿರ್ಭಯಾ ಫಂಡ್'‌ನ್ನು ರಚಿಸಿತು. ಕೇಂದ್ರ ಬಜೆಟ್ ನಲ್ಲಿ ಅದಕ್ಕಾಗಿ 1,100 ಕೋಟಿ ಮೀಸಲಾಗಿಡಲಾಯಿತು. ಆದರೆ ಮಹಿಳೆಯರ ಭದ್ರತೆಗೆ ಸಂಬಂಧಿಸಿದಂತೆ ಒಂದೇ ಒಂದು ಪೈಸೆಯನ್ನು ವಿನಿಯೋಗಿಸಲಾಗಿಲ್ಲ" ಎಂದು ಮೋದಿ ಗುಡುಗಿದ್ದಾರೆ.

ಇಂತಹ ಕ್ರಮಗಳು ಕೇವಲ ಪೇಪರ್‌ಗಳಲ್ಲಷ್ಟೇ ಉಳಿದರೆ "ಈ ದೇಶದ ತಾಯಿ ಮತ್ತು ಸಹೋದರಿಯರು ಸುರಕ್ಷಿತ ಭಾವನೆಯನ್ನು ಅನುಭವಿಸುವುದಿಲ್ಲ" ಎಂದು ಮೋದಿ ಸೋನಿಯಾ ವಿರುದ್ಧ ಕಿಡಿಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ