ಹಣ ನೀಡಲು ನಿರಾಕರಿಸಿದ ಮಹಿಳೆಗೆ ಆಸಿಡ್ ಹಾಕುವ ಬೆದರಿಕೆಯೊಡ್ಡಿದ ಭಿಕ್ಷುಕ

ಶನಿವಾರ, 24 ಆಗಸ್ಟ್ 2013 (13:22 IST)
PR
ಲೋಕಲ್‌ ರೈಲಿನಲ್ಲಿ ಪ್ರ.ಯಾಣಿಸುತ್ತಿದ್ದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತೆಯೊಬ್ಬಳಿಗೆ ಭಿಕ್ಷುಕನೊಬ್ಬ ಬೆದರಿಕೆಯೊಡ್ಡಿದ ವಿಚಿತ್ರ ಘಟನೆ ವರದಿಯಾಗಿದೆ.

ರೋಶಿನಿ ರಾವತ್ ಎನ್ನುವ ಮಹಿಳೆ ನಿನ್ನೆ ಸಂಜೆ 7 ಗಂಟೆಗೆ ಮುಂಬೈನ ಕಲ್ಯಾಣದಿಂದ ತೆರಳುತ್ತಿರುವ ರೈಲಿನಲ್ಲಿರುವ ಮಹಿಳಾ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದರು. ಬೋಗಿಯಲ್ಲಿದ್ದ ಭಿಕ್ಷುಕನೊಬ್ಬ ಪ್ರತಿಯೊಬ್ಬ ಮಹಿಳೆಯನ್ನು ಮುಟ್ಟಿ ಹಣ ನೀಡುವಂತೆ ಒತ್ತಾಯಿಸುತ್ತಿದ್ದ. ರಾವತ್‌ಳನ್ನು ಕೂಡಾ ಭಿಕ್ಷುಕ ಮುಟ್ಟಿ ಹಣ ನೀಡುವಂತೆ ಒತ್ತಾಯಿಸುತ್ತಿದ್ದಾಗ ಎಚ್ಚರಿಕೆ ನೀಡಿದ್ದಾರೆ. ಆದರೆ, ಅದಕ್ಕೆ ಕ್ಯಾರೆ ಎನ್ನದೆ ತನ್ನ ಚಾಳಿ ಮುಂದುವರಿಸಿದಾಗ ಹಣ ನೀಡಲು ನಿರಾಕರಿಸಿದ್ದಾರೆ.

ಅವಮಾನಗೊಂಡ ಭಿಕ್ಷುಕ ತನ್ನ ಜೇಬಲ್ಲಿದ್ದ ಬಾಟಲ್ ಹೊರತೆಗೆದು ರೋಶಿನಿ ರಾವತ್ ಅವರ ಮುಖದ ಮೇಲೆ ಆಸಿಡ್ ಹಾಕುವುದಾಗಿ ಬೆದರಿಕೆಯೊಡ್ಡಿದ್ದಾನೆ. ಆಸಿಡ್ ಇರಬಹುದು ಎಂದು ಆತಂಕಗೊಂಡು ಪಕ್ಕದಲ್ಲಿದ್ದ ತಮ್ಮ ಸಹದ್ಯೋಗಿಗೆ ಭಿಕ್ಷುಕನ ವರ್ತನೆಯ ಮಾಹಿತಿ ನೀಡಿದ್ದಾರೆ.

ಪೊಲೀಸರನ್ನು ಕರೆಯುವುದಾಗಿ ಎಚ್ಚರಿಕೆ ನೀಡಿದರೂ ಭಿಕ್ಷುಕ, ಪೊಲೀಸರನ್ನೇ ಮನಬಂದಂತೆ ಅಸಹ್ಯ ಭಾಷೆಗಳಿಂದ ನಿಂದಿಸಿ, ರಾವುತ್ ಅವರ ಬ್ಯಾಗ್ ಕಸಿಯಲು ಪ್ರಯತ್ನಿಸಿದ್ದಾನೆ. ಆದರೆ, ಆತನನ್ನು ಹಿಂದಕ್ಕೆ ತಳ್ಳಿ ಓಡಿಹೋಗುವಲ್ಲಿ ಯಶಸ್ವಿಯಾಗಿದ್ದಾರೆ.

ರೈಲಿನಲ್ಲಿದ್ದ ಮತ್ತೊಬ್ಬ ಪ್ರಯಾಣಿಕ ದೇವೇಂದ್ರ ಯಾದವ್ ಕೊನೆಗೂ ಭಿಕ್ಷುಕನನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊನೆಗೂ ವಿರುದ್ಧ ರೋಶಿನಿ ರಾವತ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ