ಹರೆಯದ ಬಾಲಕಿಯರ ಜತೆ ಸೆಕ್ಸ್‌ನಿಂದ ಆಯಸ್ಸು ವೃದ್ಧಿ: ಅಸಾರಾಂ ನಂಬಿಕೆ

ಶುಕ್ರವಾರ, 18 ಅಕ್ಟೋಬರ್ 2013 (17:49 IST)
PR
PR
ಸೂರತ್: ವಿವಾದಾತ್ಮಕ ದೇವಮಾನವ ಅಸಾರಾಂ ಬಾಪು 13-16ರ ಹದಿಹರೆಯದ ಬಾಲಕಿಯರ ಜತೆ ಸೆಕ್ಸ್ ಅಪೇಕ್ಷಿಸಿದ್ದ. ಏಕೆಂದರೆ ಅದರಿಂದ ಅವನ ಆಯಸ್ಸು ವೃದ್ಧಿಯಾಗುತ್ತದೆನ್ನುವುದು ಅವನ ನಂಬಿಕೆಯಾಗಿತ್ತು. ಹೀಗೆಂದು ಅಸಾರಾಂ ಬಾಪುವಿನ ಅಹ್ಮದಾಬಾದ್ ಮೂಲದ ಆಶ್ರಮದಲ್ಲಿ ಕೆಲಸ ಮಾಡುತ್ತಿದ್ದ ಮಾಜಿ ಸೇವಕ ಸ್ಫೋಟಕ ಮಾಹಿತಿಯನ್ನು ಬಟಾಬಯಲು ಮಾಡಿದ್ದಾನೆ. ಬಾಪುವಿನ ಚೇಲಾಗಳು ತನ್ನ ಮೇಲೆ ಸೇಡುತೀರಿಸಿಕೊಳ್ಳುತ್ತಾರೆಂಬ ಭಯದಿಂದ ಸೇವಕ ತನ್ನ ಹೆಸರನ್ನು ಕೂಡ ಬಾಯ್ಬಿಟ್ಟಿಲ್ಲ. ಆಶ್ರಮದಲ್ಲಿ ಅಸಾರಾಂ ಅನೇಕ ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ನಿದರ್ಶನಗಳನ್ನು ಕಣ್ಣಾರೆ ಕಂಡಿದ್ದಾಗಿ ಹೇಳಿದ್ದಾನೆ.

ಆಗ ನಾನು ಅಸಹಾಯಕನಾಗಿದ್ದೆ. ಆಶ್ರಮದಲ್ಲಿ ಅಸಾರಾಂ ಗೂಢಚಾರರು ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದರು. ಅಸಾರಾಂ ವಿರುದ್ಧ ಧ್ವನಿ ಎತ್ತಿದವರ ಮೇಲೆ ಹಲ್ಲೆ ನಡೆಸುತ್ತಿದ್ದರು ಎಂದು ಪೊಲೀಸರಿಗೆ ತಿಳಿಸಿದ್ದಾನೆ.ಪ್ರಾಚೀನ ಗ್ರಂಥ ಭವ ಪ್ರಕಾಶ್ ಆಯುರ್ವೇದವನ್ನು ಓದುವುದಕ್ಕೆ ಅಸಾರಾಂ ಇಷ್ಟಪಡುತ್ತಿದ್ದರು. ಭವ ಪ್ರಕಾಶ್ ಆಯುರ್ವೇದದ ಎರಡನೇ ಶ್ಲೋಕದರಲ್ಲಿ 13-16 ರ ವಯಸ್ಸಿನ ಬಾಲಕಿಯ ಜತೆ ಸೆಕ್ಸ್ ಮಾಡಿದರೆ ಆಯಸ್ಸು ಮತ್ತು ಲೈಂಗಿಕ ಶಕ್ತಿ ವೃದ್ಧಿಸುತ್ತದೆ ಎಂದು ತಿಳಿಸಿದ್ದು, ಬಾಪು ಅದನ್ನು ಆಗಾಗ್ಗೆ ಓದುತ್ತಿದ್ದ ಎಂದು ಮಾಜಿ ಭಕ್ತ ಹೇಳಿದ್ದಾನೆ.

ವೆಬ್ದುನಿಯಾವನ್ನು ಓದಿ