ಹಾಟ್ ಹಾಟ್ ರಾಖಿ ಸಾವಂತ್ ಲೋಕಸಭೆ ಚುನಾವಣಾ ಕಣಕ್ಕೆ

ಶನಿವಾರ, 5 ಏಪ್ರಿಲ್ 2014 (16:15 IST)
ಬಾಲಿವುಡ್ ಹಾಟ್ ಐಟಂ ಗರ್ಲ್ ರಾಖಿ ಸಾವಂತ್ ಮುಂಬೈನ ಆಗ್ನೇಯ ಲೋಕಸಭೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಮೆಟ್ರೋ ನಗರಗಳಲ್ಲಿ ಮಹಿಳೆಯರಿಗೆ ಸುರಕ್ಷೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೋರಾಟ ಮಾಡಲು ಚುನಾವಣೆ ಕಣಕ್ಕಿಳಿದಿರುವುದಾಗಿ ರಾಖಿ ಸಾವಂತ್ ಹೇಳಿದ್ದಾರೆ.

ರಾಖಿ ಸಾವಂತ್ ತಮ್ಮ ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ಗುರುದಾಸ್ ಕಾಮತ್, ಶಿವಸೇನೆ, ಗಜಾನನ್ ಕಿರ್ತಿಕರ್, ಎಂಎನ್‌‌‍ಎಸ್ ಪಕ್ಷದ ಮಹೇಶ್ ಮಾಂಜ್ರೆಕರ್ ಮತ್ತು ಆಮ್ ಆದ್ಮಿ ಪಕ್ಷದ ಮಯಾಂಕ್ ಗಾಂಧಿ ವಿರುದ್ಧ ಹಣಾಹಣಿ ನಡೆಸಲಿದ್ದಾರೆ.‍

ರಾಜಕೀಯ ಪಕ್ಷಗಳು ಟಿಕೆಟ್ ನೀಡದಿದ್ದರಿಂದ ಪಕ್ಷೇತರರಾಗಿ ಕಣಕ್ಕಿಳಿದಿದ್ದೀರಾ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ರಾಖಿ, ರಾಜಕೀಯ ಪಕ್ಷವೊಂದು ನನಗೆ ಟಿಕೆಟ್ ನೀಡಲು ಮುಂದೆ ಬಂದಿತ್ತು. ಆದರೆ, ನಾನೇ ನೋ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.

ರಾಜಕೀಯ ದಾಳ ಹೇಗೆ ನಡೆಸಬೇಕು ಎಂದು ನನಗೆ ತಿಳಿದಿಲ್ಲ. ಸಾಮಾನ್ಯ ಜನತೆಯ ಸಮಸ್ಯೆಗಳನ್ನು ಪರಿಹರಿಸಿ ಸಮಾಜಕ್ಕೆ ಒಳ್ಳೆಯದು ಮಾಡಬೇಕು ಎನ್ನುವ ಉದ್ದೇಶದಿಂದ ಕಣಕ್ಕಿಳಿದಿದ್ದೇನೆ. ಜನರು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಡ ಹೇರಿದ್ದರಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ