'ಹಿಂದು ದಂಪತಿ ಕಡ್ಡಾಯವಾಗಿ ಐದು ಮಕ್ಕಳನ್ನು ಹೆರಬೇಕಾಗಿದೆ'

ಶನಿವಾರ, 22 ಫೆಬ್ರವರಿ 2014 (20:08 IST)
PR
PR
ಭೂಪಾಲ್: ಮತಾಂತರವನ್ನು ನಿಲ್ಲಿಸಲು ಸಾಧ್ಯವಾಗದಿದ್ದರೆ ಹಿಂದೂಗಳು ದೇಶದಲ್ಲಿ ಅಲ್ಪಸಂಖ್ಯಾತರಾಗುವ ಕಾಲ ದೂರವಿಲ್ಲ ಎಂದು ವಿಶ್ವ ಹಿಂದು ಪರಿಷತ್ ಸಂಚಾಲಕ ಅಶೋಕ್ ಸಿಂಘಾಲ್ ಶನಿವಾರ ತಿಳಿಸಿದ್ದಾರೆ. ಪ್ರತಿಯೊಂದು ಹಿಂದು ದಂಪತಿ ಐದು ಮಕ್ಕಳನ್ನು ಹೆರುವುದು ಈಗ ಕಡ್ಡಾಯವಾಗಿದೆ ಎಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಹೇಳಿದರು.

ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯನ್ನು ಶ್ಲಾಘಿಸಿದ ಅವರು ಅನೇಕ ವಿಷಯಗಳ ಬಗ್ಗೆ ಸೋನಿಯಾ ವಿರುದ್ದ ವಾಗ್ದಾಳಿ ಮಾಡಿದರು.ಬಿಜೆಪಿ ಜತೆ ವಿಎಚ್‌ಪಿಗೆ ಯಾವುದೇ ಸಂಬಂಧವಿಲ್ಲದಿದ್ದರೂ ಲೋಕಸಭೆ ಚುನಾವಣೆಯಲ್ಲಿ ಮೋದಿಗೆ ಬೆಂಬಲಿಸುವುದಾಗಿ ಅವರು ತಿಳಿಸಿದರು.

ವೆಬ್ದುನಿಯಾವನ್ನು ಓದಿ