ಹೋಟೆಲ್‌ನಲ್ಲಿ ಗ್ರಾಹಕ ಈರುಳ್ಳಿ ಕೇಳಿದ್ದಕ್ಕೆ ಮನಬಂದಂತೆ ಥಳಿಸಿದ ವೇಟರ್‌ಗಳು

ಸೋಮವಾರ, 2 ಡಿಸೆಂಬರ್ 2013 (16:54 IST)
PTI
23 ವರ್ಷ ವಯಸ್ಸಿನ ಮಯೂರ್ ಜಾಧವ್ ತಮ್ಮ ಕುಟುಂಬದೊಂದಿಗೆ ದಕ್ಷಿಣ ಮುಂಬೈನಲ್ಲಿರುವ ಹೋಟೆಲ್ಲೊಂದಕ್ಕೆ ತೆರಳಿದ್ದರು. ಊಟ ಮಾಡುವ ಸಂದರ್ಭದಲ್ಲಿ ಹೆಚ್ಚುವರಿಯಾಗಿ ಈರುಳ್ಳಿ ನೀಡುವಂತೆ ವೇಟರ್‌ಗೆ ಕೋರಿದ್ದಾರೆ. ಈರುಳ್ಳಿ ದರ ಹೆಚ್ಚಾಗಿದ್ದರಿಂದ ಹೆಚ್ಚುವರಿ ಪ್ಲೇಟ್ ಈರುಳ್ಳಿ ನೀಡಲಾಗುವುದಿಲ್ಲ ಎಂದು ವೇಟರ್ ವಾದಿಸಿದ್ದಾನೆ. ಇದರಿಂದಾಗಿ ಉಭಯರ ಮಧ್ಯೆ ವಾಗ್ವಾದ ಹಿಂಸೆಗೆ ತೆರಳಿದಾಗ ಹೋಟೆಲ್ ಸಿಬ್ಬಂದಿ ಜಾಧವ್ ಮೇಲೆ ಹಲ್ಲೆ ಮಾಡಿ ಆಸ್ಪತ್ರೆಗೆ ದಾಖಲಾಗುವಂತೆ ಮಾಡಿದ ಘಟನೆ ವರದಿಯಾಗಿದೆ.

ಕಳೆದ ಎರಡು ವಾರಗಳಿಂದ ಈರುಳ್ಳಿ ದರ ಇಳಿಕೆಯಾಗಿದೆ. ಹೆಚ್ಚುವರಿ ಪ್ಲೇಟ್ ಈರುಳ್ಳಿ ಯಾಕೆ ಕೊಡುವುದಿಲ್ಲ ಎಂದು ಜಾಧವ್ ವೇಟರ್‌ಗೆ ಕೇಳಿದ್ದಾರೆ. ಈರುಳ್ಳಿ ದರದ ಬಗ್ಗೆ ನನಗೆ ಪಾಠ ಕಲಿಸಲು ಬರಬೇಡ ಎಂದು ವೇಟರ್ ಮಾರುತ್ತರ ನೀಡಿದ್ದಾನೆ.

ಪರಸ್ಪರ ವಾಗ್ವಾದ ಹಿಂಸಾರೂಪಕ್ಕೆ ತೆರಳಿದಾಗ ವೇಟರ್‌ನೊಬ್ಬ ಜಾಧವ್ ಮೇಲೆ ಎಸೆದ ಗ್ಲಾಸ್‌ ಮುಖಕ್ಕೆ ಬಡಿದಿದ್ದರಿಂದ ರಕ್ತ ಹರಿಯಲು ಆರಂಭಿಸಿದೆ.

ಗಾಯಗೊಂಡ ಜಾಧವ್ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾನೆ. ಪೊಲೀಸರು ಆರೋಪಿಗಳನ್ನು ಬಂಧಿಸಿ ಕಿರುಕುಳ ಮತ್ತು ಹಲ್ಲೆ ಆರೋಪಗಳನ್ನು ದಾಖಲಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ