ಹೋರಾಟದ ಪ್ರತಿಫಲ: ಕೇಜ್ರಿವಾಲ್ ನಿವಾಸಕ್ಕೆ ವಿದ್ಯುತ್ ಕಟ್

ಶುಕ್ರವಾರ, 28 ಜೂನ್ 2013 (15:13 IST)
PTI
ದೆಹಲಿ ಸರ್ಕಾರದ ವಿರುದ್ಧ ಮುಗಿಬಿದ್ದಿರುವ ಆಮ್‌ಆದ್ಮಿ ಪಕ್ಷದ ನೇತಾರ ಅರವಿಂದ್‌ ಕೇಜ್ರಿವಾಲ್‌ ಮನೆಯ ವಿದ್ಯುತ್‌ ಸಂಪರ್ಕವನ್ನು ಕಟ್‌ ಮಾಡಲಾಗಿದೆ.

ಹೌದು, ವಿದ್ಯುತ್‌ ದರ ಏರಿಕೆ ಖಂಡಿಸಿ ಕೇಜ್ರಿವಾಲ್‌ ಕಳೆದ 4 ತಿಂಗಳಿಂದ ತಮ್ಮ ಮನೆಯ ವಿದ್ಯುತ್‌ ಬಿಲ್‌ ಕಟ್ಟಿರಲಿಲ್ಲ. ಈ ಮೊತ್ತ 7331 ರೂ. ತಲುಪಿತ್ತು. ಗುರುವಾರ, ಬಾಕಿ ಉಳಿಸಿಕೊಂಡ ಮನೆಗಳ ಸಂಪರ್ಕ ಕಟ್‌ ಮಾಡಲು ಬಂದ ಉತ್ತರಪ್ರದೇಶ ವಿದ್ಯುತ್‌ ನಿಗಮದ ಅಧಿಕಾರಿಗಳು ಕೌಸಾಂಬಿಯಲ್ಲಿರುವ ಗಿರ್‍ನಾರ್‌ ಅಪಾರ್ಟ್‌ಮೆಂಟ್‌ 902ನೇ ನಂಬರಿನ ಮನೆಯ ವಿದ್ಯುತ್‌ ಸಂಪರ್ಕ ಕಟ್‌ ಮಾಡಿ ಹೋಗಿದ್ದಾರೆ.

ಆದರೆ ಕೆಲ ಹೊತ್ತಿನ ಬಳಿಕ ಸ್ವತಃ ಕೇಜ್ರಿವಾಲ್‌ ತಮ್ಮ ಮನೆಯ ವಿದ್ಯುತ್‌ ಸಂಪರ್ಕವನ್ನು ತಾವೇ ಸರಿಪಡಿಸಿಕೊಂಡು, ಪುನಃ ವಿದ್ಯುತ್‌ ಪೂರೈಕೆ ಸುಗಮ ಮಾಡಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ