‘ಗುಜರಾತ್ ಯೋಧರು ದೇಶಕ್ಕಾಗಿ ಹುತಾತ್ಮರಾದ ಉದಾಹರಣೆ ಇದೆಯೇ?’
ಗುರುವಾರ, 11 ಮೇ 2017 (10:00 IST)
ಲಕ್ನೋ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಪ್ರಧಾನಿ ಮೋದಿಯನ್ನು ಟೀಕಿಸುವ ಭರದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ. ಯೋಧರ ಬಗ್ಗೆ ಕೆದಕಿ ವಿವಾದಕ್ಕೀಡಾಗಿದ್ದಾರೆ.
‘ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ದಕ್ಷಿಣ ಭಾರತದ ರಾಜ್ಯಗಳ ಯೋಧರು ದೇಶಕ್ಕಾಗಿ ಹೋರಾಡಿ ಹುತಾತ್ಮರಾಗುತ್ತಾರೆ. ಆದರೆ ಗುಜರಾತ್ ಯೋಧರು ಯಾಕಿಲ್ಲ?’ ಎಂದು ಮಾಜಿ ಸಿಎಂ ಪ್ರಶ್ನಿಸಿದ್ದು ಭಾರೀ ವಿವಾದಕ್ಕೀಡಾಗಿದೆ.
ಉತ್ತರ ಪ್ರದೇಶ ಚುನಾವಣೆ ಸಂದರ್ಭದಲ್ಲಿಯೂ ರಾಷ್ಟ್ರೀಯತೆ ಮತ್ತು ವಂದೇ ಮಾತರಂ ಬಗ್ಗೆ ಮಾತನಾಡಿ ಅಖಿಲೇಶ್ ಟೀಕೆಗೊಳಗಾಗಿದ್ದರು. ಇದೀಗ ಯೋಧರ ಬಗ್ಗೆ ಮಾತನಾಡಿದ್ದಕ್ಕೆ ಟ್ವಿಟರ್ ನಲ್ಲಿ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಿಸ್ಟರ್. ಅಖಿಲೇಶ್ ಸಾಹೇಬ್ರೇ, ಯೋಧರು ಯಾವುದೇ ಪ್ರದೇಶಕ್ಕೆ ಸೇರಿದವರಲ್ಲ. ಅವರು ಭಾರತೀಯರು. ಸದ್ಯ ನಿಮ್ಮನ್ನು ಎರಡನೇ ಬಾರಿಗೆ ಆರಿಸಲಿಲ್ಲವಲ್ಲ. ನಾವು ಬಚಾವಾದೆವು. ನಾಚಿಕೆಯಾಗಬೇಕು ನಿಮ್ಮ ಈ ಹೇಳಿಕೆಗೆ ಎಂದು ಜಾಡಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ