ಗುಜರಾತ್ ಮಂತ್ರಿಯೊಂದರ ಹೆಲಿಕಾಪ್ಟರ್‌ನಲ್ಲಿ ಸಿಕ್ಕಿತು 1.75 ಲಕ್ಷ ರೂ

ಬುಧವಾರ, 23 ಏಪ್ರಿಲ್ 2014 (08:59 IST)
ರಾಜ್‌ಕೋಟ್‌ನ ಚುನಾವಣಾ ಅಧಿಕಾರಿಗಳು ಗುಜರಾತ್ ಸಚಿವ ಪುರುಷೋತ್ತಮ್ ಸೋಲಂಕಿ ಅವರ ಹೆಲಿಕಾಪ್ಟರ್‌ನಿಂದ 1.75 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. 
ಚುನಾವಣಾ ಪ್ರಚಾರ ನಡೆಯಲು ಮಂಗಳವಾರ ಜಸದಾನ್‌ಗೆ ಆಗಮಿಸಿದ ರಾಜ್ಯದ ಮೀನುಗಾರಿಕೆ ಸಚಿವರಾದ ಸೋಲಂಕಿಯವರ ಹೆಲಿಕಾಫ್ಟರ್‌ನ್ನು ಶೋಧಿಸಿದ ಇಬ್ಬರು ಅಧಿಕಾರಿಗಳು 1.75 ಲಕ್ಷ  ರೂಪಾಯಿಗಳನ್ನುವಶಪಡಿಸಿಕೊಂಡಿದ್ದಾರೆ.

ನಾವು ಹಣವನ್ನು "ವಶಪಡಿಸಿಕೊಂಡಿದ್ದೇವೆ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ಈ ಕುರಿತು ಸೂಚನೆ ನೀಡಲಾಗಿದೆ"  ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ