ಒಡಿಶಾ: 15 ನೇ ವಯಸ್ಸಿಗೇ ಮುನ್ನವೇ ತಾಯಿಯಾಗಿರುವ 11,000 ಬಾಲಕಿಯರು

ಶುಕ್ರವಾರ, 10 ಏಪ್ರಿಲ್ 2015 (16:01 IST)
ಒಡಿಶಾದ ಸರ್ಕಾರ ಪ್ರಕಟಿಸಿರುವ ಜನಗಣತಿ ವರದಿಯೊಂದು ಆಘಾತಕಾರಿ ಮಾಹಿತಿಯನ್ನು ಹೊರಹಾಕಿದೆ. ರಾಜ್ಯದಲ್ಲಿ ಸರಿಸುಮಾರು 11 ಸಾವಿರ ಬಾಲಕಿಯರು 15 ನೇ ವರ್ಷದ ಒಳಗೆ ತಾಯಿಯಾಗಿರುವುದು ಈ ವರದಿಯಲ್ಲಿ ಬಹಿರಂಗಗೊಂಡಿದೆ. ಇದು ಬಾಲ್ಯವಿವಾಹ ಮತ್ತು ಅವಧಿಪೂರ್ವ ಗರ್ಭಧಾರಣೆಯ ಕುರಿತು ಅರಿವು ಮೂಡಿಸಲು ಹಮ್ಮಿಕೊಂಡ ಸಮಾಜ ಕಲ್ಯಾಣ ಕಾರ್ಯಕ್ರಮಗಳು ವಿಫಲವಾಗಿವೆ ಎಂಬುದನ್ನು ಸಾಬೀತು ಪಡಿಸಿದೆ. 
 
ಜನಗಣತಿ ಪ್ರಕಾರ ಒಡಿಶಾದಲ್ಲಿ 15 ರ ಪ್ರಾಯದ 59.09 ಲಕ್ಷ ಬಾಲಕಿಯರಿದ್ದು, ಇವರುಗಳ ಪೈಕಿ 15,41,729 (0.7%) ಮಂದಿ ಈಗಾಗಲೇ ವಿವಾಹವಾಗಿದ್ದಾರೆ, ಹಾಗೂ 15ಕ್ಕಿಂತ ಕಡಿಮೆ ವಯಸ್ಸಿನ 10,685 ಮಂದಿ ಮಗುವಿನ ತಾಯಿಯಾಗಿದ್ದಾರೆ. ಮದುವೆಯಾಗಿರುವ ಬಾಲಕಿಯರಲ್ಲಿ 3,896 ಬಾಲಕಿಯರು ಒಂದು ಮಗುವಿನ ತಾಯಿಯಾಗಿದ್ದರೆ 6,789  (16.27%) ಮಂದಿ ಈಗಾಗಲೇ ಎರಡು ಮಕ್ಕಳನ್ನು ಹೆತ್ತಿದ್ದಾರೆ. 
 
ಈ ಕುರಿತು ಪ್ರತಿಕ್ರಿಯಿಸಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಷಾ ದೇವಿ, ಇದನ್ನು ತಡೆಗಟ್ಟಲು ಬಾಲ್ಯವಿವಾಹ ಮತ್ತು ಅವಧಿಪೂರ್ನ ಗರ್ಭಧಾರಣೆಯ ತಡೆಗಟ್ಟಲು ಪೋಷಕರಲ್ಲಿ ಜಾಗೃತಿ ಸೃಷ್ಟಿಸುವುದೊಂದು ಪರಿಹಾರ ಎಂದಿದ್ದಾರೆ. 
 
ಮಹಿಳಾ ಹಕ್ಕು ಪ್ರತಿಪಾದಕರಾದ ನಮೃತಾ ಛಡ್ಡಾ ಪ್ರಕಾರ, ಬುಡಕಟ್ಟು ಜನಾಂಗದವರು ಅತಿ ಕಡಿಮೆ ವಯಸ್ಸಿಗೆ ಮದುವೆ ಮಾಡಿಸುವುದು ಮತ್ತು ಎರಡನೆಯದಾಗಿ, ಆರ್ಥಿಕವಾಗಿ ಹಿಂದುಳಿದವರು ಸಾಮಾಜಿಕ ಭದ್ರತಾ ಉದ್ದೇಶಗಳಿಗಾಗಿ ತಮ್ಮ ಹುಡುಗಿಗೆ 18 ವರ್ಷವಾಗುವ ಮುನ್ನವೇ ಮದುವೆ ಮಾಡಿಸುವುದು ಅವಧಿಪೂರ್ವ ಗರ್ಭಧಾರಣೆಗೆ ಕಾರಣವಾಗಿವೆ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ