12 ವರ್ಷದ ಬಾಲಕಿಯ ಮೇಲೆ 12 ವರ್ಷದ ಐವರು ಬಾಲಕರಿಂದಲೇ ಗ್ಯಾಂಗ್‌ರೇಪ್

ಸೋಮವಾರ, 31 ಮಾರ್ಚ್ 2014 (16:19 IST)
ನಗರದ ಹಟಿಗಾಂವ್ ಪ್ರದೇಶದಲ್ಲಿ 12 ವರ್ಷ ವಯಸ್ಸಿನ ಬಾಲಕಿಯ ಮೇಲೆ ಐವರು ಅಪ್ರಾಪ್ತರು ಅತ್ಯಾಚಾರವೆಸಗಿದ ಹೇಯ ಘಟನೆ ವರದಿಯಾಗಿದೆ.

ಬಾಲಕಿಯ ತಾಯಿ ದಿನಗೂಲಿ ಕೆಲಸದ ನಿಮಿತ್ಯ ಹೊರಗಡೆಯಿದ್ದಾಗ, ಮನೆಯ ಬಳಿಯೇ ನಿನ್ನೆ ರಾತ್ರಿ ಬಾಲಕಿಯ ಗ್ಯಾಂಗ್‌ರೇಪ್ ಎಸಗಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬಾಲಕಿಯ ಮನೆಯ ನೆರೆಹೊರೆಯಲ್ಲಿ ವಾಸಿಸುತ್ತಿದ್ದ 12 ರಿಂದ 16 ವರ್ಷ ವಯಸ್ಸಿನೊಳಗಿನ ಬಾಲಕರು ನಿನ್ನೆ ರಾತ್ರಿ ಬಾಲಕಿಯನ್ನು ಮನೆಯಿಂದ ಹೊರಗೆ ಕರೆದು ಅತ್ಯಾಚಾಪವೆಸಗಿದ್ದಾರೆ. ಆರೋಪಿಗಳ ವಿರುದ್ಧ ಬಷಿಷ್ಠ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಯಿ ಮನೆಗೆ ಮರಳಿದ ನಂತರ ಬಾಲಕಿ ಅತ್ಯಾಚಾರವೆಸಗಿದ ಬಗ್ಗೆ ಘಟನೆಯನ್ನು ವಿವರಿಸಿದಾಗ ಕೂಡಲೇ ಪೊಲೀಸ್ ಠಾಣೆಗೆ ತೆರಳಿ ಬಾಲಕಿಯ ತಾಯಿ ದೂರು ದಾಖಲಿಸಿದ್ದಾಳೆ.

ಅತ್ಯಾಚಾರವೆಸಗಿದ ಐವರು ಬಾಲಕರನ್ನು ಪೊಲೀಸರು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ನ್ಯಾಯಾಲಯದಲ್ಲಿ ನಾಳೆ ಹಾಜರುಪಡಿಸಲಾಗುವುದು. ಬಾಲಕಿಯನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ